ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಾಮಮಾರ್ಗದಲ್ಲಿ ಗೆಲ್ಲಲು ಬಿಜೆಪಿ ಹುನ್ನಾರ ನಡೆಸುತ್ತಿದೆ: ರಮಾನಾಥ ರೈ (Ramanath Rai | BJP | Congress | Dakshina kannada | Election)
Bookmark and Share Feedback Print
 
ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಅಕ್ರಮವೆಸಗಿ ವಾಮಮಾರ್ಗದಲ್ಲಿ ಗೆಲ್ಲಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿ ನಡೆಸಿದ ಕೆಲವೊಂದು ಕುತಂತ್ರಗಳನ್ನು ಇಲ್ಲೂ ನಡೆಸಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಮತದಾರರನ್ನು ಟೂರ್ ನೆಪದಲ್ಲಿ ಕರೆದೊಯ್ದು ಮತ ಚಲಾಯಿಸದಂತೆ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಕೆಲವೆಡೆ ಮತದಾರರ ಕೈ ಬೆರಳಿಗೆ ಶಾಯಿ ಹಾಕುವ ಮೂಲಕ ಮತದಾನದ ಅವಕಾಶ ತಪ್ಪಿಸುವ ಕೆಲಸ ನಡೆಯುತ್ತಿದೆ. ಇನ್ನು ಕೆಲವೆಡೆ ಇದ್ದ ಗುರುತು ಪತ್ರಗಳನ್ನು ಕಸಿದು ಮತದಾನದ ಅವಕಾಶವನ್ನೇ ಇಲ್ಲದಂತೆ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

ಬಿಜೆಪಿಯ ಈ ಎಲ್ಲ ಅಕ್ರಮ ನಡೆಗಳ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ. ಬಿಜೆಪಿ ಪಕ್ಷದವರ ಚಲನವಲನ ಬಗ್ಗೆ ನಿಗಾ ಇಡಲು ಕಾರ್ಯಕರ್ತರಿಗೂ ಸೂಚನೆ ನೀಡಲಾಗಿದೆ. ನೇರ ಮಾರ್ಗದಲ್ಲಿ ಚುನಾವಣೆ ಎದುರಿಸುವ ಶಕ್ತಿ ಇಲ್ಲದೆ ಬಿಜೆಪಿ ಮುಖಂಡರು ಈ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.

ರಾಜ್ಯವನ್ನು ಅಭಿವೃದ್ದಿ ಮಾಡಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ರಾಜಧಾನಿಯಲ್ಲಿ ಎಕರೆಗಟ್ಟಲೆ ಭೂಮಿ ಲೂಟಿ ಮಾಡಿ ಹಳ್ಳಿಯಲ್ಲಿ ಬಡ ಜನರಿಗೆ 5 ಸೆಂಟ್ಸ್ ಜಾಗ ನೀಡಲು ಅವರಿಂದ ಸಾಧ್ಯವಾಗಲಿಲ್ಲ. ಕೇಂದ್ರದಿಂದ ಬಂದ ಅನುದಾನವನ್ನು ಮಾತ್ರ ಬಳಕೆ ಮಾಡಿ, ರಾಜ್ಯದಿಂದ ಯಾವುದೇ ಕಾಮಗಾರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ