ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಶೇಷ ಅಧಿವೇಶನ ಕರೆಯುವುದು ಅಗತ್ಯವಾಗಿದೆ: ಪಾಟೀಲ್ (Special Session | Krishna dispute)
Bookmark and Share Feedback Print
 
ಕೃಷ್ಣಾಕೊಳ್ಳ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ತಕ್ಷಣ ವಿಶೇಷ ಅಧಿವೇಶನ ಕರೆಯಬೇಕೆಂದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೃಷ್ಣಾ ನ್ಯಾಯಾಧಿಕರಣ ತೀರ್ಪು ಹೊರಬಿದ್ದಿದೆ. ರಾಜ್ಯಕ್ಕೆ 278ಟಿಎಂಸಿ ನೀರು ಸಿಗುವ ನೀರೀಕ್ಷೆ ಇತ್ತು. ಆದರೀಗ ಹಂಚಿಕೆಯಾದ ನೀರನ್ನಾದರೂ ಸದ್ಬಳಕೆ ಮಾಡಿಕೊಳ್ಳಲು ರಾಜ್ಯ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಂತಿಮ ನಿರ್ಧಾರ ಕೈಗೊಳ್ಳಲು ಇದು ಸೂಕ್ತ ಕಾಲ ಎಂದರು.

ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅಲ್ಲಿನ ಸರಕಾರಗಳು ಎಲ್ಲ ಸಿದ್ಧತೆ ಕೈಗೊಂಡಿವೆ. ಆದರೆ ನಾವು (ಕರ್ನಾಟಕ) ಆ ಬಗ್ಗೆ ವಿಚಾರ ಮಾಡಿ ಯೋಜನೆಗಳನ್ನು ಕಾರ್ಯಗೊಳಿಸಬೇಕೆಂದರೆ 15 ವರ್ಷಗಳು ಬೇಕಾಗುತ್ತವೆ. ಅದರ ಬದಲು ಕೃಷ್ಣಾ ಕೊಳ್ಳದ ಯೋಜನೆಗಳಿಗೆ ತಕ್ಷಣವೇ ಮೂಲ ಸೌಲಭ್ಯ ಕಲ್ಪಿಸಿ 2-3 ವರ್ಷಗಳಲ್ಲಿ ಪೂರ್ಣಗೊಳಿಸಲು ಸರಕಾರ ಮುಂದಾಗಬೇಕು. ಈ ಕೆಲಸ ಆಗದಿದ್ದರೆ ಜನರಿಗೆ ನ್ಯಾಯ ಒದಗಿಸುವಂತಾಗುವುದಿಲ್ಲ ಎಂದರು.

ನೀರಾವರಿ ಯೋಜನೆಗಳ ಕುರಿತು ಚರ್ಚಿಸಿ, ಸ್ಪಷ್ಟ ನಿರ್ಧಾರ ಕೈಗೊಳ್ಳಲು ವಿಶೇಷ ಅಧಿವೇಶನ ಕರೆದು ನೀರಾವರಿ ಹಾಗೂ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ