ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಾನಪದ ವಿವಿಗೆ ಅಂತಾರಾಷ್ಟ್ರೀಯ ಕೇಂದ್ರದ ಅವಕಾಶ: ಗೊರುಚ (university)
Bookmark and Share Feedback Print
 
ಬೆಂಗಳೂರು, ಮೈಸೂರು ಹೊರತುಪಡಿಸಿ ಮಧ್ಯ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ತಿಳಿಸಿದರು.

ಜಿಲ್ಲೆಯ ರಾಣೆಬೆನ್ನೂರು, ಮೋಟೆಬೆನ್ನೂರು ಮತ್ತು ಶಿಗ್ಗಾವಿ ತಾಲೂಕು ಗೊಟಗೋಡಿ ಗ್ರಾಮಗಳಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸ್ಥಳ ಪರೀಶೀಲನೆ ನಡೆಸಿ ಸುದ್ದಿಗಾರರ ಜತೆ ಅವರು ಮಾತನಾಡಿದರು.

ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ಮೊದಲ ಬಾರಿಗೆ ಸ್ಥಳ ಪರೀಶೀಲನೆ ಆರಂಭಿಸಿದೆ. ಈ ತಿಂಗಳಾಂತ್ಯದಲ್ಲಿ ಸೂಕ್ತ ಸ್ಥಳದ ಆಯ್ಕೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ನೂತನವಾಗಿ ಸ್ಥಾಪಿಸಲ್ಪಡುವ ಜಾನಪದ ವಿಶ್ವವಿದ್ಯಾಲಯ ಅಂತಾರಾಷ್ಟ್ರೀಯ ಕೇಂದ್ರವಾಗುವ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ವಾತಾವರಣವಿರುವ ಸ್ಥಳವನ್ನು ವಿವಿಗೆ ಹುಡುಕಲಾಗುತ್ತಿದೆ. ಇಡೀ ವಿಶ್ವದಲ್ಲಿ ಮೊದಲ ಜಾನಪದ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಭಾಜನವಾಗಲಿದೆ. ಗ್ರಾಮ ಭಾರತ ಮಾದರಿಯಲ್ಲಿ ವಿವಿ ರೂಪಿಸುವ ಉದ್ದೇಶವಿದೆ ಎಂದು ಹೇಳಿದರು.

ವಿವಿಗೆ 500 ಎಕರೆ ಭೂಮಿ ಅಗತ್ಯವಿದ್ದು ಅದು ಪ್ರಾಕೃತಿಕ ಪರಿಸರದಲ್ಲಿರಬೇಕು. ಕೃಷಿ ಮತ್ತು ಅರಣ್ಯ ಭೂಮಿಯಲ್ಲದ ಬರಡು ಭೂಮಿಯನ್ನು ಹುಡುಕಲಾಗುತ್ತಿದೆ. ವಿವಿಯನ್ನು ಜಾನಪದ ಸಂಶೋಧನೆ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುತ್ತಿದೆ. ಇದನ್ನು ಬರೀ ಪಾಠ ಮಾಡುವ ಕೇಂದ್ರವನ್ನಾಗಿಸಲು ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ