ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ ವರದಿ-ಕಾಂಗ್ರೆಸ್ ಕುತಂತ್ರ: ರೆಡ್ಡಿ ಕಿಡಿ (CEC | Janardana Reddy | Supreme court | BJP | Congress | Andhra pradesh)
Bookmark and Share Feedback Print
 
'ನಾವು ನ್ಯಾಯಬದ್ಧವಾಗಿ ಜೀವನ ಮತ್ತು ವ್ಯವಹಾರ ನಡೆಸುತ್ತಿದ್ದೇವೆ. ಗಣಿಗಾರಿಕೆ ಕುರಿತಂತೆ ಸಿಇಸಿ ನೀಡಿರುವ ವರದಿ ಸಂಪೂರ್ಣ ಪೂರ್ವಾಗ್ರಹ ಪೀಡಿತದಿಂದ ಕೂಡಿದೆ' ಎಂದು ಪ್ರವಾಸೋದ್ಯಮ ಸಚಿವ ಮತ್ತು ಓಬಳಾಪುರಂ ಮೈನಿಂಗ್ ಕಂಪನಿ ಮಾಲೀಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತಂತೆ ಸಿಇಸಿ ಶುಕ್ರವಾರ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ಎಂದು ಸರ್ವೆ ಆಫ್ ಇಂಡಿಯಾ ವರದಿಯಿಂದ ಸಾಬೀತಾಗಿದೆ. ಅಲ್ಲದೇ ಸಿಇಸಿ ಶಿಫಾರಸ್ಸು ಜಾರಿಗೆ ಆಂಧ್ರಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ಮಾಜಿ ಮುಖ್ಯಮಂತ್ರಿ ವೈಎಸ್ಆರ್ ನಿಧನದ ನಂತರ ಆಂಧ್ರಪ್ರದೇಶ ಮತ್ತು ಕೇಂದ್ರ ಸರಕಾರ ತಮ್ಮನ್ನು ರಾಜಕೀಯವಾಗಿ ನಿರ್ನಾಮ ಮಾಡಬೇಕೆಂಬ ಉದ್ದೇಶದಿಂದ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದರು.

ಪ್ರಭಾವಿಗಳ 'ಕೈ'ವಾಡ?: ಸಿಇಸಿ ವರದಿ ರಾಜಕೀಯ ಪ್ರೇರಿತವಾಗಿದ್ದು, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ವ್ಯಕ್ತಿಗಳ 'ಕೈ'ವಾಡವಿದೆ. ಈ ಷಡ್ಯಂತ್ರ ಮಾಡಿದ ಪ್ರಭಾವಿಗಳ ಹೆಸರನ್ನು ಶೀಘ್ರದಲ್ಲೇ ಬಹಿರಂಗ ಪಡಿಸುವುದಾಗಿ ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡಿಕಾರಿದರು.

ಸಿಇಸಿ ವರದಿಯನ್ನು ಆಂಧ್ರಪ್ರದೇಶದ ಹೈಕೋರ್ಟ್ ಕೂಡ ತಿರಸ್ಕರಿಸಿತ್ತು. ಇದೀಗ ದೆಹಲಿಯಲ್ಲೇ ಕುಳಿತು ಸಿಇಸಿ ವರದಿ ಸಿದ್ದಪಡಿಸಿದೆ. ಇದು ಎರಡು ರಾಜ್ಯಗಳ ನಡುವೆ ಅಲ್ಲೋಲ-ಕಲ್ಲೋಲ ಸೃಷ್ಟಿಸುವ ವ್ಯವಸ್ಥಿತ ಸಂಚು ಇದಾಗಿದೆ. ಇದು ಯಾರ ಪಿತೂರಿ ಎಂಬುದನ್ನು ಸಾಕ್ಷಿ ಸಮೇತ ರಾಷ್ಟ್ರದ ಜನರ ಮುಂದಿಡುತ್ತೇನೆ ಎಂದು ಸವಾಲು ಹಾಕಿದರು.

ಸಿಇಸಿ ಅಧಿಕಾರಿಗಳು ಹಲವು ಒತ್ತಡಗಳಿಗೆ ಒಳಗಾಗಿದ್ದರು. ನಮಗೆ ಕಾನೂನು ಬದ್ಧವಾಗಿಯೇ ನಿಯಮಾವಳಿ ಪ್ರಕಾರ 20 ವರ್ಷಗಳ ಗಣಿ ಗುತ್ತಿಗೆ ನೀಡಲಾಗಿತ್ತು. ನಾವು ಯಾವುದೇ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓಎಂಸಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ಗಣಿ ಮಾಲೀಕರು 1982ರಲ್ಲಿ ಪರವಾನಿಗೆ ನವೀಕರಣ ಮಾಡಿಕೊಳ್ಳಬೇಕಿತ್ತು. ಆದರೆ ಅವರು ಆಗ ನವೀಕರಣ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಈ ಗಣಿಯು 1997ರಲ್ಲಿ ನವೀಕರಣಗೊಂಡಿದೆ. ಗಣಿ ಪರವಾನಿಗೆ ನಿಯಮಗಳ ಪ್ರಕಾರ 20 ವರ್ಷಗಳ ಕಾಲ ಗಣಿಗಾರಿಕೆಗೆ ಪರವಾನಿಗೆ ದೊರಕಿದೆ. ಆದರೆ 1982ರಿಂದ 2002ರ ಅವಧಿಯನ್ನು ಪರಿಗಣಿಸಿ, ಈ ಗಣಿಗಾರಿಕೆ ಪರವಾನಿಗೆ ರದ್ದು ಮಾಡಬೇಕೆಂದು ಜೀವರಾಜ್ಕಾ ಅವರು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ. 2002ರಲ್ಲಿ ನಾನು ಈ ಗಣಿ ಗುತ್ತಿಗೆ ಪಡೆದಿದ್ದೇನೆ. 2017ರವರೆಗೆ ಪರವಾನಿಗೆ ಅವಧಿ ಇದೆ ಎಂದು ರೆಡ್ಡಿ ವಿವರಿಸಿದ್ದಾರೆ.

ಅಕ್ರಮ ಗಣಿ ವರದಿ ಬಹಿರಂಗ-ರೆಡ್ಡಿ ಬ್ರದರ್ಸ್‌ಗೆ ಶಾಕ್
ಸಂಬಂಧಿತ ಮಾಹಿತಿ ಹುಡುಕಿ