ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಸ್ಕೃತ ಮೃತ ಭಾಷೆಯಲ್ಲ: ಯಡಿಯೂರಪ್ಪ ಉವಾಚ (Yeddyurappa | Sanskrit | National High school | Gulbarga)
Bookmark and Share Feedback Print
 
ಸಂಸ್ಕೃತವನ್ನು ಸರಳವಾಗಿ ಅರ್ಥೈಸು ಹಾಗೂ ಕಲಿಸುವ ಮೂಲಕ ಭಾಷೆಯನ್ನು ಮುಖ್ಯವಾಹಿನಿಗೆ ತರುವ ಆಶಯ ಸರಕಾರದ್ದಾಗಿದ್ದು, ವಿದ್ವಾಂಸರು ಹಾಗೂ ಸಂಸ್ಕೃತ ಬಲ್ಲವರು ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದಾರೆ.

ಸಂಸ್ಕೃತ ಒಂದು ನಿರ್ಜೀವ ಭಾಷೆ ಎನ್ನುವ ಮಾತು ಕೇಳಿಬರುತ್ತಿರುವ ಸಂದರ್ಭದಲ್ಲಿ ಭಾಷೆಯನ್ನು ಮತ್ತೆ ಮುಖ್ಯವಾಹಿನಿಗೆ ತರಲು ಹೋರಾಟ ನಡೆಯುತ್ತಿದೆ. ಇದಕ್ಕೆ ರಾಜ್ಯ ಸರಕಾರವೂ ಕೈಜೋಡಿಸಿದೆ ಎಂದು ಬಸವನಗುಡಿ ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿ ಸಂಸ್ಕೃತ ಭಾರತಿ ಹಮ್ಮಿಕೊಂಡಿರುವ ವಿಶ್ವ ಸಂಸ್ಕೃತ ಪುಸ್ತಕ ಪ್ರದರ್ಶನ ಉದ್ಘಾಟಿಸಿ ತಿಳಿಸಿದರು.

ಸಂಸ್ಕೃತ ಭಾಷೆಯ ಪ್ರಗತಿಗೆ ಸರಕಾರ ಶ್ರಮಿಸುತ್ತಿದೆ. ಇದಕ್ಕಾಗಿಯೇ ಗುಲ್ಬರ್ಗದಲ್ಲಿ 1 ಕೋಟಿ ರೂ. ಅನುದಾನದಲ್ಲಿ ರಾಜಧರ್ಮ, ನ್ಯಾಯದರ್ಶನ ಅಧ್ಯಯನ ಪೀಠ ಸ್ಥಾಪನೆ ಆಗಿದೆ. ಇದರ ಜತೆ ಮಂಡ್ಯದ ಮೇಲುಕೋಟೆಯಲ್ಲಿ ಸಂಸ್ಕೃತ ಕಲಿಕೆ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ವಿಶ್ವದ 40 ದೇಶದಲ್ಲಿನ 250 ವಿವಿಗಳಲ್ಲಿ ಸಂಸ್ಕೃತ ಅಧ್ಯಯನ ನಡೆಯುತ್ತಿದೆ. ರಾಜ್ಯದಲ್ಲಿಯೂ 235 ಶಿಕ್ಷಣ ಸಂಸ್ಥೆ ಹಾಗೂ 16 ಧಾರ್ಮಿಕ ಕೇಂದ್ರಗಳಲ್ಲಿ ಸಂಸ್ಕೃತ ಅಧ್ಯಯನ ನಡೆಯುತ್ತಿದೆ. ಇಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಕಲಿಯುತ್ತಿದ್ದಾರೆ. ಪ್ರತ್ಯೇಕ ವಿವಿ ಸ್ಥಾಪನೆಯೂ ಸೇರಿದಂತೆ ಹಲವು ವಿಧದ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.

ವೈಜ್ಞಾನಿಕ ವಿಷ್ಲೇಷಣೆಯಲ್ಲಿ ಸಂಸ್ಕೃತ ದೇಶದ ಮಾತ್ರವಲ್ಲ ವಿಶ್ವದ ಅನೇಕ ಭಾಷೆಗಳ ಮಾತೃಭಾಷೆ ಎಂದು ದೃಢಪಟ್ಟಿದೆ. ವಿಶ್ವಭಾಷೆಗಳ ಜನಕ ಎನಿಸಿರುವ ಸಂಸ್ಕೃತ ಇಂದು ಸಂಕಷ್ಟದಲ್ಲಿದೆ. ಈ ಮಾದರಿಯ ಕಾರ್ಯಕ್ರಮದ ಮೂಲಕ ಇದರ ಜನಪ್ರಿಯತೆ ಹೆಚ್ಚಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ