ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೋಲಾಹಲದ ನಡುವೆ ಡೆಪ್ಯೂಟಿ ಸ್ಪೀಕರ್ ಆಗಿ 'ಭಟ್' ಆಯ್ಕೆ (Yogish Bhat | Dy speakar | BJP | Congress | Siddaramaiah | Yeddyurappa)
Bookmark and Share Feedback Print
 
PR
ಪ್ರತಿಪಕ್ಷಗಳ ತೀವ್ರ ವಿರೋಧ, ಪ್ರತಿಭಟನೆಯ ನಡುವೆಯೇ ಮಂಗಳೂರಿನ ಬಿಜೆಪಿ ಶಾಸಕ ಎನ್.ಯೋಗೀಶ್ ಭಟ್ ಅವರು ವಿಧಾನಸಭೆಯ ನೂತನ ಡೆಪ್ಯೂಟಿ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಂಗಳವಾರ ಸದನದಲ್ಲಿ ಘೋಷಿಸಿದರು.

ನಾಮಪತ್ರ ಸಲ್ಲಿಸಲು ಸೋಮವಾರ ಬೆಳಿಗ್ಗೆ 10ರಿಂದ 12 ಗಂಟೆಯವರಿಗೆ ಸಮಯ ನಿಗದಿ ಮಾಡಲಾಗಿತ್ತು. ಈ ಅವಧಿಯಲ್ಲಿ ಯೋಗೀಶ್ ಭಟ್ ಮಾತ್ರ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದರು. ಉಳಿದಂತೆ ಯಾರೂ ಸಲ್ಲಿಸಿಲ್ಲವಾಗಿತ್ತು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾದಂತೆ ಎಂದು ಸಚಿವಾಲಯದ ಮೂಲಗಳು ತಿಳಿಸಿದ್ದವು.

ಮೂರನೇ ದಿನವಾದ ಇಂದು ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯನವರು, 16 ಮಂದಿ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಹಾಗಾಗಿ ತೀರ್ಪು ಬರುವವರೆಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಸುಸುವುದು ಸೂಕ್ತವಲ್ಲ ಎಂದು ಸ್ಪೀಕರ್ ಕೆ.ಜಿ.ಬೋಪಯ್ಯ ಅವರಲ್ಲಿ ಮನವಿ ಮಾಡಿಕೊಂಡರು.

ಈ ಹಿಂದಿನಿಂದಲೂ ವಿಧಾನಸಭೆಯ ಉಪಾಧ್ಯಕ್ಷ ಸ್ಥಾನವನ್ನು ವಿಪಕ್ಷಗಳಿಗೆ ಬಿಟ್ಟು ಕೊಡುವುದು ಸಂಪ್ರದಾಯ ಎಂದು ಹೇಳಿದಾಗ, ಕಾನೂನು ಸಚಿವ ಸುರೇಶ್ ಕುಮಾರ್ ಮಧ್ಯ ಪ್ರವೇಶಿಸಿ, ಯಾವುದು ಸಂಪ್ರದಾಯ ಸ್ವಾಮಿ, 1985ರಿಂದಲೂ ಅಂತಹ ಸಂಪ್ರದಾಯ ಇಲ್ಲವೇ ಇಲ್ಲ. ಎಲ್ಲವೂ ಆಡಳಿತ ಪಕ್ಷಕ್ಕೆ ಇತ್ತು ಎಂದು ವಿವರ ನೀಡಲು ಹೋದಾಗ ಕಾಂಗ್ರೆಸ್, ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೋಲಾಹಲ ಎದ್ದಿತ್ತು.

ಯಾವುದೇ ಕಾರಣಕ್ಕೂ ವಿಧಾನಸಭೆ ಉಪಾಧ್ಯಕ್ಷ ಆಯ್ಕೆಯ ಚುನಾವಣೆ ನಡೆಸಕೂಡದು ಎಂದು ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾಗಲೇ, ಸ್ಪೀಕರ್ ಬೋಪಯ್ಯ ಅವರು ವಿರೋಧದ ನಡುವೆಯೇ ಬಿಜೆಪಿ ಶಾಸಕ ಯೋಗೀಶ್ ಭಟ್ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಯೋಗೀಶ್ ಭಟ್ ಅವರು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಭಟ್ ಅವರ ಹೆಸರು ಈ ಹಿಂದೆ ಸಭಾಧ್ಯಕ್ಷರ ಸ್ಥಾನಕ್ಕೂ ಕೇಳಿಬಂದಿತ್ತು.

ನಿನ್ನೆಯ ಕಲಾಪದಲ್ಲಿ ಸಾಕಷ್ಟು ಕೋಲಾಹಲ ನಡೆಯುತ್ತಿದ್ದರೂ ಸಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದರು. ಇಂದು ಕೂಡ ಸಿಎಂ ಮೌನಕ್ಕೆ ಶರಣಾಗಿದ್ದ ಸನ್ನಿವೇಶ ಸದನದಲ್ಲಿ ಗಮನಾರ್ಹವಾಗಿತ್ತು.

ಈ ಹಿಂದೆ ಬಿಜೆಪಿಗೆ ಸ್ಥಾನ ಬಿಟ್ಟು ಕೊಟ್ಟಿದ್ದರೆ?-ಸಿಎಂ
ವಿಧಾನ ಸಭೆಯ ಉಪಾಧ್ಯಕ್ಷ ಸ್ಥಾನವನ್ನು ವಿಪಕ್ಷಗಳಿಗೆ ಬಿಟ್ಟುಕೊಡುವ ಸಂಪ್ರದಾಯವಿಲ್ಲ. ಹಾಗಿದ್ದರೆ ಈ ಹಿಂದೆ ಬಿಜೆಪಿಗೆ ಆ ಸ್ಥಾನ ಬಿಟ್ಟು ಕೊಟ್ಟಿದ್ದರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾರವಾಗಿ ಪ್ರತಿಪಕ್ಷಗಳಿಗೆ ಪ್ರಶ್ನಿಸಿದ್ದರು.

ವಿಧಾನಮಂಡಲದ ಅಧಿವೇಶನದ ಆರಂಭಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಡೆಪ್ಯೂಟಿ ಸ್ಪೀಕರ್ ಆಯ್ಕೆ ವಿಚಾರದಲ್ಲಿ ಪ್ರತಿಪಕ್ಷಗಳಿಗೆ ಸೋಲು ಖಚಿತ. ಸದನದಲ್ಲಿ ಸ್ಪೀಕರ್ ರೂಲಿಂಗ್ ಅಂತಿಮ. ಅದಕ್ಕಾಗಿ ವಿಪಕ್ಷಗಳು ಅನಾವಶ್ಯಕವಾಗಿ ಕೋಲಾಹಲ ಎಬ್ಬಿಸುವುದರಲ್ಲಿ ಯಾವುದೇ ಪುರುಷಾರ್ಥ ಇಲ್ಲ ಎಂದು ತಿಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ