ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡ್ಡಿ ಚೋರ್ ಹೈ...ಬೀದಿಗಿಳಿದ ಕೈ-ಜೆಡಿಎಸ್ ಶಾಸಕರು! (BJP | Congress | JDS | Siddaramaiah | Bopayya | Revanna)
Bookmark and Share Feedback Print
 
ರಾಜ್ಯ ಸರಕಾರದ ಭ್ರಷ್ಟಾಚಾರ ಹಗರಣಗಳ ಬಗ್ಗೆ ನಿಲುವಳಿ ಸೂಚನೆ ಮೂಲಕ ಚರ್ಚಿಸಲು ಕಳೆದ ಐದು ದಿನಗಳಿಂದ ವಿಧಾನಮಂಡಲದ ಉಭಯ ಸದನಗಳಲ್ಲಿ ಧರಣಿ ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗುರುವಾರ ಕೂಡ ಎರಡೂ ಸದನಗಳಲ್ಲೂ ಸಭಾತ್ಯಾಗ ಮಾಡಿ ನಂತರ ವಿಧಾನಸೌಧದ ಮುಂದೆ ಧರಣಿ ನಡೆಸಿದರು.

ರಾಜ್ಯ ಸರಕಾರದ ಭ್ರಷ್ಟಾಚಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷದ ಸದಸ್ಯರು ವಿಧಾನಸಭೆಯಲ್ಲಿ ಸಭಾತ್ಯಾಗ ನಡೆಸಿದ ನಂತರ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಸಿಲನ್ನೂ ಲೆಕ್ಕಿಸದೆ ಬಂದು ಧರಣಿ ನಡೆಸಿದರು.

ಧರಣಿ ನಿರತ ವಿಧಾನಸಭಾ ಸದಸ್ಯರ ಜತೆ ವಿಧಾನಪರಿಷತ್ ಸದಸ್ಯರು ಸಾಥ್ ನೀಡಿದರು. ವಿಧಾನಸಭೆಯಲ್ಲಿ ಸರಕಾರ ಧರಣಿಯ ಮಧ್ಯೆಯೇ ಕಲಾಪ ನಡೆಸಿದ್ದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದ್ದರು.

ಸಾವಿರಾರು ಕೋಟಿ ಬಿಜೆಪಿ ಲೂಟಿ...ಗಲಿಗಲಿ ಚೋರ್ ಹೈ...ಯಡಿಯೂರಪ್ಪ ಚೋರ್ ಹೈ...ಸ್ಪೀಕರ್ ಚೋರ್ ಹೈ...ಬಿಜೆಪಿ ಏಜೆಂಟ್ ಸ್ಪೀಕರ್ ಬೋಪಯ್ಯಗೆ ಧಿಕ್ಕಾರ, ಯಡಿಯೂರಪ್ಪ ರಾಜೀನಾಮೆ ನೀಡಲೇಬೇಕು ಎನ್ನುವ ಘೋಷಣೆಗಳನ್ನು ಕೂಗಿದರು.

ಈ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದು, ಹೋರಾಟದ ಸ್ವರೂಪದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಈ ಭ್ರಷ್ಟ ಸರಕಾರ ತೊಲಗುವವರೆಗೂ ಹೋರಾಟ ನಿಲ್ಲದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ