ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಳ್ಳಾರಿಯಲ್ಲಿ 4 ಕೋಟಿ ರೂ. ಸುಟ್ಟ ನೋಟು ಪತ್ತೆ! (Bellary | Currency | Burnt Notes | Mining)
Bookmark and Share Feedback Print
 
ರೆಡ್ಡಿ ಸಹೋದರರ ಗಣಿಗಾರಿಕೆಯಿಂದಾಗಿ ಶ್ರೀಮಂತ ಪ್ರದೇಶಗಳ ಸಾಲಿಗೆ ಸೇರಿರುವ ಬಳ್ಳಾರಿಯಲ್ಲಿ ಕೋಟಿಗಟ್ಟಲೆ ನೋಟನ್ನು ಸುಡಲಾಗಿದೆ! ಅಲೀಪುರ ಶ್ರೀ ಮಹಾದೇವ ತಾತನವರ ಮಠದ ಹಿಂಭಾಗದಲ್ಲಿ ಅಸಲಿ ನೋಟುಗಳು ಅರೆಬೆರೆ ಸುಟ್ಟ ಸ್ಥಿತಿಯಲ್ಲಿ ದೊರೆತಿದ್ದು, ಸುಮಾರು 4 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ಸುಟ್ಟ ನೋಟುಗಳೆಲ್ಲವೂ ಅಸಲಿ ಎಂದು ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಿದ್ದಾರೆ.

ಶನಿವಾರ ಮಧ್ಯ ರಾತ್ರಿ ಈ ಘಟನೆ ನಡೆದಿದೆ. ಆದರೆ ಅಸಲಿ ನೋಟಿನೊಂದಿಗೆ ನಕಲಿ ನೋಟುಗಳೂ ಬೂದಿಯಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಸ್ಥಳೀಯರ ಪ್ರಕಾರ, ಲಾರಿ ಹಾಗೂ ದೊಡ್ಡ ವಾಹನಗಳಲ್ಲಿ ಬಂದ ಗುಂಪೊಂದು 3 ಗೋಣಿಚೀಲಗಳಲ್ಲಿ ತುಂಬಿಸಲಾಗಿದ್ದ ಈ ನೋಟುಗಳನ್ನು ಸುಟ್ಟು ಹಾಕಿದೆ. ಸುಟ್ಟ ವಾಸನೆ ಬಂದ ಕೂಡಲೇ ಪಕ್ಕದ ಮಠದ ವಿದ್ಯಾರ್ಥಿಗಳು ಬಂದಾಗ ನೋಟು ಸುಟ್ಟವರು ಓಡಿ ಹೋಗಿದ್ದಾರೆ.

100 ಮತ್ತು 500 ರೂ. ಮುಖಬೆಲೆಯ ಅರ್ಧಸುಟ್ಟ ಕರೆನ್ಸಿ ನೋಟುಗಳು ಆ ಪ್ರದೇಶದಲ್ಲಿ ಚದುರಿಬಿದ್ದಿತ್ತು. ಇದಲ್ಲದೆ ಇನ್ನೂ ಮೂರು ಗೋಣಿಚೀಲಗಳನ್ನು ಅಪರಿಚಿತರು ತೋಡಿಗೆ ಬಿಸಾಕಿದ್ದಾರೆ ಎಂದೂ ಸ್ಥಳೀಯರು ಪೊಲೀಸರಲ್ಲಿ ಹೇಳಿದ್ದಾರೆ.

ಹಣ ಯಾರಿಗೆ ಸೇರಿದ್ದು, ಇನ್ನೂ ಎಷ್ಟು ಹಣವನ್ನು ಈ ರೀತಿ ಎಸೆಯಲಾಗಿದೆ ಎಂಬಿತ್ಯಾದಿಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ