ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತಾಕತ್ತಿದ್ರೆ ಬಹಿರಂಗ ಚರ್ಚೆಗೆ ಬನ್ನಿ: ಜೆಡಿಎಸ್‌‌ಗೆ ಸಿಎಂ (CM Yeddyurappa | Karnataka Politics | JDS | Congress | Land Scam)
Bookmark and Share Feedback Print
 
ಭೂಹಗರಣದ ಕುರಿತು ಇಲ್ಲ ಸಲ್ಲದ ಆರೋಪ ಮಾಡುತ್ತಾ, ಬಿಜೆಪಿ ಸರಕಾರ ಉರುಳಿಸಲು ಪ್ರಯತ್ನಿಸುತ್ತಿರುವ ಪ್ರತಿಪಕ್ಷಗಳಿಗೆ, ವಿಶೇಷವಾಗಿ ಜೆಡಿಎಸ್‌ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ಪಂಥಾಹ್ವಾನ ನೀಡಿದ್ದಾರೆ. ತಾಕತ್ತಿದ್ದರೆ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿಎಂ ಸವಾಲು ಹಾಕಿದ್ದಾರೆ.

ರಾಜ್ಯಪಾಲ ಹಠಾವೋ ಅಭಿಯಾನದ ರೂಪು ರೇಷೆಗಳನ್ನು ನಿರ್ಧರಿಸಲು ಕರೆಯಲಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಸಿಎಂ ಭ್ರಷ್ಟಾಚಾರದ ವಿರುದ್ಧ ತಮ್ಮ ಸಮರದ ವಿವರ ನೀಡಿದರು.

ಅದರಂತೆ, ದೇವೇಗೌಡ ಮತ್ತವರ ಮಕ್ಕಳಿಗೆ ನೇರ ಆಹ್ವಾನ ನೀಡಿ, ಕಳೆದ ಎರಡುವರೆ ವರ್ಷಗಳ ಬಿಜೆಪಿ ಆಡಳಿತದ ಕುರಿತು ಇರುವ ಯಾವುದೇ ಟೀಕೆ ಟಿಪ್ಪಣಿಗಳೊಂದಿಗೆ ಚರ್ಚೆಗೆ ಬನ್ನಿ. ನಿಮ್ಮ ಯಾವುದೇ ಆರೋಪಗಳಿದ್ದರೂ ಹೇಳಿ. ನಾವು ಅದಕ್ಕೆ ಉತ್ತರಿಸುತ್ತೇವೆ. ಆಮೇಲೆ ನಿಮ್ಮ ಕರ್ಮಕಾಂಡಗಳ ಕುರಿತು ಅಂಕಿ ಅಂಶ ಸಮೇತವಾಗಿ ನಾವು ದಾಖಲೆ ಒದಗಿಸಿ ಪ್ರಶ್ನೆ ಕೇಳುತ್ತೇವೆ. ನಿಮಗೆ ತಾಕತ್ತಿದ್ದರೆ ಅದಕ್ಕೆ ಉತ್ತರಿಸಿ, ಪಕ್ಕದಲ್ಲೇ ಉಭಯ ಕಡೆಯವರೂ ಒಪ್ಪುವ 2-3 ನ್ಯಾಯಾಧೀಶರೂ ಇರಲಿ. ಮತ್ತು ಎಲ್ಲ ಮಾಧ್ಯಮಗಳನ್ನೂ ಕರೆಸೋಣ. ಈ ಚರ್ಚೆಯು ನೇರ ಪ್ರಸಾರವಾಗಲಿ ಎಂದು ಮುಖ್ಯಮಂತ್ರಿ ಸವಾಲೊಡ್ಡಿದರು

ಮಾತು ಮುಂದುವರಿಸಿದ ಅವರು, ಅಪ್ಪ-ಮಕ್ಕಳ ಎಲ್ಲ ಹಗರಣಗಳನ್ನು ಅಂಕಿ ಅಂಶಗಳ ಸಮೇತ ಬಿಚ್ಚಿಡುತ್ತೇವೆ. ಆರೋಪ ಪಟ್ಟಿಯನ್ನೂ ಬಿಡುಗಡೆ ಮಾಡುತ್ತೇವೆ ಎಂದ ಅವರು, "ದೇವೇಗೌಡರಿಗೆ ಮರೆತುಹೋಗಿರಬಹುದು, ನನ್ನ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡುತ್ತೀರಿ ಎಂಬುದು ನಿಮಗೆ ಮರೆತು ಹೋಗಿರಬಹುದು. ಅದನ್ನು ಬಿಡುಗಡೆ ಮಾಡಿ. ನಿಮಗೆ ಮರೆತು ಹೋಗಿದ್ದಕ್ಕೆ ನೆನಪಿಸುತ್ತಿದ್ದೇನೆ" ಎಂದರು.

ಈ ಮೂಲಕ ಭೂಹಗರಣ ಎಂದರೇನು, ಯಾವುದು ವಾಸ್ತವ ಸಂಗತಿ ಎಂಬುದು ಇಡೀ ದೇಶಕ್ಕೇ ಗೊತ್ತಾಗಲಿ ಎಂದು ಯಡಿಯೂರಪ್ಪ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ