ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ-ಗವರ್ನರ್ ಮುನಿಸೆಂದರು, ಗುಟ್ಟಾಗಿ ಮಾತನಾಡಿದರು! (HR Bharadwaj | BS Yeddyurappa | Karnataka | BJP)
Bookmark and Share Feedback Print
 
PR
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕಳೆದ ಹತ್ತು ದಿನಗಳಿಂದ ಯಾವುದೇ ಬೀದಿ ಜಗಳಕ್ಕೂ ಕಡಿಮೆ ಇಲ್ಲದಂತೆ ಕಚ್ಚಾಡಿಕೊಂಡದ್ದು ಜನಮನದಿಂದ ಮರೆಯಾಗುವ ಮೊದಲೇ ಪಿಸುಗುಟ್ಟಿದ್ದು ಹಲವರಲ್ಲಿ ಕುತೂಹಲಕ್ಕೆ ಕಾರಣವಾಯಿತು.

ಇದು ನಡೆದದ್ದು ಬುಧವಾರ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ. ಗಣರಾಜ್ಯೋತ್ಸವ ಪ್ರಯುಕ್ತ ಸಮಾರಂಭಕ್ಕಾಗಿ ಇಬ್ಬರೂ ಗಣ್ಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೂಗುಚ್ಚ ನೀಡಿ ರಾಜ್ಯಪಾಲ ಭಾರದ್ವಾಜ್ ಅವರನ್ನು ಸ್ವಾಗತಿಸಿದರು.

ಬಳಿಕ ಮುಖ್ಯಮಂತ್ರಿಯವರು ರಾಜ್ಯಪಾಲರ ಕಿವಿಯಲ್ಲಿ ಏನೋ ಉಸುರಿದರು. ಇಬ್ಬರ ಮುಖವೂ ಗಂಟು ಹಾಕಿದಂತೆ ಕಂಡು ಬಂದರೂ, ಕೆಲ ಕ್ಷಣಗಳ ಕಾಲ ಮಂದಸ್ಮಿತರಂತೆ ತಮ್ಮನ್ನು ತಾವು ಬಿಂಬಿಸಿಕೊಂಡರು. ತಮ್ಮ ನಡುವೆ ಏನೂ ನಡೆದೇ ಇಲ್ಲವೆಂಬಂತೆ ನಡೆದುಕೊಂಡರು.

ಮೈದಾನದಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಯಡಿಯೂರಪ್ಪ-ಭಾರದ್ವಾಜ್ ಮುಖಾಮುಖಿ ಹೇಗಿರುತ್ತದೆ ಎಂಬುದನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಕ್ಷಣಗಳು ತಾತ್ಕಾಲಿಕವಾಗಿದ್ದವು ಎನ್ನುವುದು ನಿರೂಪಿತವಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಏಟಿಗೆ ಎದಿರೇಟು ಎಂಬಂತೆ ನಡೆದುಕೊಂಡು ಬಂದಿರುವ ಅವರಿಬ್ಬರ ಸಮರ ಇಲ್ಲೂ ಮುಂದುವರಿಯಿತು.

ಸಾಮಾನ್ಯವಾಗಿ ರಾಜ್ಯಪಾಲರು ಭಾಷಣ ಮಾಡಿದ ನಂತರ ಕಾರ್ಯಕ್ರಮ ಮುಗಿಯುವವರೆಗೆ ಮುಖ್ಯಮಂತ್ರಿ ಅಲ್ಲೇ ಇರುತ್ತಾರೆ. ಆದರೆ ಇಂದು ರಾಜ್ಯಪಾಲ ಭಾರದ್ವಾಜ್ ಭಾಷಣ ಮುಗಿಯುತ್ತಿದ್ದಂತೆ, ಕಾರ್ಯಕ್ರಮ ಮುಕ್ತಾಯವಾಗುವ ಮೊದಲೇ ಮಧ್ಯದಲ್ಲಿಯೇ ನಿರ್ಗಮಿಸಿದರು. ಆ ಮೂಲಕ ತಮ್ಮ ನಡುವೆ ಎಲ್ಲವೂ ಸರಿಯಾಗಿದೆ ಎಂದು ತಪ್ಪು ಅರ್ಥ ಮಾಡಿಕೊಳ್ಳುವುದು ಬೇಕಾಗಿಲ್ಲ ಎಂಬ ಸಂದೇಶವನ್ನು ಯಡಿಯೂರಪ್ಪ ರವಾನಿಸಿದರು.
ಸಂಬಂಧಿತ ಮಾಹಿತಿ ಹುಡುಕಿ