ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಾಂಧೀಜಿಯವರ ಸರ್ವೋದಯ ಹೆಚ್ಚು ಪ್ರಸ್ತುತ: ಅನಂತಮೂರ್ತಿ (Ananth murthy | Gandhi | Kuvempu | Karnataka | BJP)
Bookmark and Share Feedback Print
 
ರಾಜ್ಯಕ್ಕೆ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿಗಿಂತ ಗಾಂಧೀಜಿಯವರ ಸರ್ವೋದಯ ಹೆಚ್ಚು ಅಗತ್ಯವಾಗಿದೆ. ಸಮಾಜದ ಕಟ್ಟಕಡೆಯ ಮನುಷ್ಯನನ್ನು ತಲುಪುವಂತಹ ತಳಮಟ್ಟದ ಕೆಲಸಗಳಾಗಬೇಕಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಯು.ಆರ್.ಆನಂತರಮೂರ್ತಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ನಗರದ ಕಮಲಾ ನೆಹರು ಮಹಿಳಾ ಕಾಲೇಜು ಕುವೆಂಪು ಸಭಾಂಗಣದಲ್ಲಿ ಅಹರ್ನಿಶಿ ಪ್ರಕಾಶನ ಮತ್ತು ಕುವೆಂಪು ವಿವಿ ಇಂಗ್ಲಿಷ್ ಭಾಷಾ ಅಧ್ಯಾಪಕರ ವೇದಿಕೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಪ್ರಸಕ್ತ ಬಿಕ್ಕಟ್ಟುಗಳು ಕುರಿತು ಮಾತನಾಡಿದರು.

ಗಾಂಧೀಜಿಯವರ ಸರ್ವೋದಯ ಅವರು ಬದುಕಿರುವವರೆಗೆ ಉಳಿದಿತ್ತು. ಅವರ ಮರಣಾ ನಂತರ ಸೂತಕದ ಛಾಯೆ ಎಂಬಂತೆ ನೆಹರೂ ಕಾಲದಲ್ಲಿ ಸ್ವಲ್ಪ ಉಳಿದುಕೊಂಡಿತ್ತು. ಆನಂತರದಲ್ಲಿ ಅದು ಮಾಯವಾಯಿತು. ಮಧ್ಯಮವರ್ಗಕ್ಕೆ ಒಳ್ಳೆಯದಾಗಬೇಕೆಂದಿದ್ದರೆ ಅದು ಸರ್ವೋದಯದಿಂದ ಮಾತ್ರ ಸಾಧ್ಯ ಎಂದರು.

ಸ್ವ ಪ್ರತಿಷ್ಠೆಯ ಅಭಿವೃದ್ಧಿಯನ್ನು ಟೀಕಿಸದಿದ್ದರೆ, ಪ್ರಶ್ನೆ ಮಾಡದಿದ್ದರೆ ಏನ್ನನ್ನೂ ಟೀಕಿಸಲು ಸಾಧ್ಯವಿಲ್ಲ. 19ನೇ ಶತಮಾನದಲ್ಲಿ ಮತ ಮತ್ತು ಧರ್ಮವನ್ನು ಪ್ರಶ್ನಿಸದಿದ್ದರೆ ಏನನ್ನೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂಬಂತ ಸ್ಥಿತಿ ಇತ್ತು. ಕಾರ್ಲ್ ಮಾರ್ಕ್ಸ್ ಸಹ ಇದನ್ನೇ ಹೇಳಿದ್ದ. ಆದರೆ ಈಗಿನ ಮಧ್ಯಮ ವರ್ಗ ಇರುವ ವ್ಯವಸ್ಥೆಯನ್ನೇ ಒಪ್ಪಿಕೊಂಡು ಭ್ರಮಾ ಲೋಕದಲ್ಲಿ ಬದುಕುವ ಬಗೆಯನ್ನು ಕಂಡುಕೊಂಡು ಪ್ರಶ್ನೆ ಮಾಡುವುದನ್ನೇ ಮರೆತಂತಿದೆ ಎಂದು ವಿಶ್ಲೇಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ