ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನ್ನ ಆರೋಪ ಸುಳ್ಳಾದ್ರೆ ರಾಜಕೀಯ ಸನ್ಯಾಸ ಸ್ವೀಕರಿಸ್ತೇನೆ: ಸಿದ್ದರಾಮಯ್ಯ (Siddaramaiah | Congress | BJP | Yeddyurappa | JDS)
Bookmark and Share Feedback Print
 
ಕಳ್ಳರು ಹಾಗೂ ಭ್ರಷ್ಟರಿಗೆ ಮಠಾಧೀಶರು ಬೆಂಬಲ ನೀಡುವುದು ಅಧರ್ಮವಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ವಿ-ಲೀಡ್‌ನಲ್ಲಿ ಚಾಮರಾಜನಗರ ಜಿಪಂ ಹಾಗೂ ತಾಪಂ ಸದಸ್ಯರಿಗೆ ಆಯೋಜಿಸಿರುವ 2 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಾಕಷ್ಟು ತಪ್ಪುಗಳನ್ನು ಮಾಡಿರುವುದು ಗೊತ್ತಿದೆ. ಸ್ವಜನ ಪಕ್ಷಪಾತದಿಂದ ಸರಕಾರ ಹಾಗೂ ರೈತನಿಗೆ ಕೋಟ್ಯಂತರ ನಷ್ಟವಾಗುವಂತೆ ಮಾಡಿ ತಾವು ಲಾಭ ಮಾಡಿಕೊಂಡಿದ್ದಾರೆ. ಇಂಥ ಮುಖ್ಯಮಂತ್ರಿ ಪರವಾಗಿ ಮಠಾಧೀಶರು ಮಾತನಾಡಬಾರದು. ಜತೆಗೆ ಅವರಿಗೆ ಸಹಾಯ ಮಾಡುವುದು ತಪ್ಪು. ಇದು ಗೊತ್ತಿದ್ದೂ ಅವರ ಪರವಾಗಿ ಮಠಾಧೀಶರು ನಿಂತರೆ ಅದು ಅಧರ್ಮ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಿವೇಶನ, ಮನೆಯಿಲ್ಲ ಎಂದು ಅಫಿಡವಿಟ್ ನೀಡಿದ ಪುತ್ರನಿಗೆ ಇವರು ನಿವೇಶನ ನೀಡಿದರು. ಜಯಮಹಲ್‌ನಲ್ಲಿ ಮೂರು ಅಂತಸ್ತಿನ ಮನೆ ಮಗ ರಾಘವೇಂದ್ರನಿಗೆ ಇರುವುದು ಸಿಎಂಗೆ ಗೊತ್ತಿರಲಿಲ್ಲವೇ. ಹಾಗಿದ್ದರೆ ನಿವೇಶನ ಯಾಕೆ ವಾಪಸ್ ಕೊಡಬೇಕಿತ್ತು. ಕದ್ದ ಮಾಲನ್ನು ವಾಪಸ್ ನೀಡಿದ ತಕ್ಷಣ ಕಳ್ಳತನ ಮಾಡಿದ್ದಕ್ಕೆ ಶಿಕ್ಷೆಯಾಗಬಾರದು ಎಂದರೆ ಹೇಗೆ ಎಂದು ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

ಇದು ನೈತಿಕತೆಯ ಪ್ರಶ್ನೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರೇ ಹೇಳಿದ್ದಾರೆ. ನೈತಿಕತೆ ಬಗ್ಗೆ ನಂಬಿಕೆ ಇದ್ದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದರು. ಮುಖ್ಯಮಂತ್ರಿ ಅಧಿಕಾರದಿಂದ ಇಳಿಯಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಹೋರಾಟ ಆರಂಭಿಸಿದೆ. ಜ.30ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ನಂತರ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯಪಾಲರು ಕಾನೂನು ರೀತಿಯಲ್ಲಿ ಕೈಗೊಂಡ ಕ್ರಮಗಳು ಸರಿಯಾಗಿವೆ. ಜಯಲಲಿತಾ ಹಾಗೂ ಅಂತುಳೆ ವಿರುದ್ದ ಆರೋಪ ಕೇಳಿ ಬಂದಾಗ ಕ್ರಮ ಕೈಗೊಳ್ಳಲಾಗಿತ್ತು. ಅದೇ ರೀತಿ ಇಲ್ಲಿ ರಾಜ್ಯಪಾಲರು ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ್ದಾರೆ. ಯಡಿಯೂರಪ್ಪ ಅವರು ನಿರಪರಾಧಿ ಆಗಿದ್ದರೆ ಎಲ್ಲಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ. ನನ್ನ ಅವಧಿ ಸೇರಿ ಎಲ್ಲರ ಕಾಲದ ತನಿಖೆಯಾಗಲಿ. ನಾನು ಹೇಳಿದ್ದು ಸುಳ್ಳು ಎನ್ನುವುದಾದರೆ ರಾಜಕೀಯ ಸನ್ಯಾಸ ಸ್ವೀಕರಿಸಲು ಸಿದ್ಧ ಎಂದರು.
ಸಂಬಂಧಿತ ಮಾಹಿತಿ ಹುಡುಕಿ