ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂಗೆ ಮಾಟ ಮಾಡಿಲ್ಲ; ಕೇಸ್ ಹಾಕ್ತೇನೆ: ಸಿದ್ದರಾಮಯ್ಯ (BJP | Yeddyurappa | Congress | JDS | Siddaramaiah | Mata)
ಮಾಟ ಮಂತ್ರದ ಮೂಲಕ ತನ್ನನ್ನು ಮುಗಿಸುವ ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ ಎಂಬ ಆರೋಪ ಕಾಡುತ್ತಿರುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಟ-ಮಂತ್ರದ ವಿಷಯದಲ್ಲಿ ವಿನಾ ಕಾರಣ ನನ್ನ ಹೆಸರನ್ನು ಎಳೆದು ತಂದಿದ್ದಾರೆ. ಇದರಿಂದಾಗಿ ನನ್ನ ಗೌರವಕ್ಕೆ ಚ್ಯುತಿಯಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಂಜನಗೂಡಿನ ಸುತ್ತೂರು ಜಾತ್ರೆಗೆ ಆಗಮಿಸಿದ್ದ ವೇಳೆ ತನ್ನ ವಿರುದ್ಧ ಮಾಟ ಮಂತ್ರ ಮಾಡುತ್ತಿದ್ದು, ನನಗೆ ಮನೆಯಿಂದ ವಿಧಾನಸಭೆಗೆ, ವಿಧಾನಸಭೆಯಿಂದ ಮನೆಗೆ ಸುರಕ್ಷಿತವಾಗಿ ವಾಪಸ್ ಆಗುತ್ತೇನೆ ಎಂಬ ನಂಬಿಕೆ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ದೇವೇಗೌಡರ ಗರಡಿಯಲ್ಲಿ ಪಳಗಿದ್ದ ಸಿದ್ದರಾಮಯ್ಯ ವಾಮಮಾರ್ಗ ಅನುಸರಿಸುವುದರಲ್ಲಿ ಪಳಗಿದ ಕೈ ಎಂದು ಆರೋಪಿಸಿದ್ದರು.

ಮಾಟ-ಮಂತ್ರದ ಮೂಲಕ ನನ್ನ ಜೀವ ತೆಗೆಯುವ ಹುನ್ನಾರ ನಡೆಸಿದ್ದಾರೆ ಎಂದು ನನ್ನ ವಿರುದ್ಧ ಮುಖ್ಯಮಂತ್ರಿಗಳು ಗೂಬೆ ಕೂರಿಸಿದ್ದಾರೆ. ಇದು ನನ್ನ ಚಾರಿತ್ರ್ಯವಧೆ ಮಾಡುವ ಹುನ್ನಾರ ಇದು ಎಂದು ಕಿಡಿಕಾರಿರುವ ಅವರು, ಈ ಬಗ್ಗೆ ತಾನು ಮುಖ್ಯಮಂತ್ರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ನನ್ನ ವಿರುದ್ಧದ ಆರೋಪ ಶುದ್ಧ ಸುಳ್ಳು. ನನಗೆ ಯಾವುದೇ ಮೌಢ್ಯದಲ್ಲಿ ನಂಬಿಕೆ ಇಲ್ಲ. ಬಸವಣ್ಣ ಕೂಡ ಮೌಢ್ಯವನ್ನು ವಿರೋಧಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಮೌಢ್ಯವನ್ನೇ ನಂಬಿದ್ದಾರೆ. ಹಾಗಾಗಿ ಅವರು ಬೇರೆಯವರ ಮೇಲೂ ಮೌಢ್ಯವನ್ನೇ ಹೇರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು ಇದು ಮುಖ್ಯಮಂತ್ರಿಗಳ ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಲೇಖನಗಳು