ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗ್ಯಾಸ್ ಮಾಫಿಯಾ: ಸಚಿವೆ ಕರಂದ್ಲಾಜೆಗೂ ಜೀವ ಬೆದರಿಕೆ (Shobha karandlaje | BJP | Yeddyurappa | Ration card | Karnataka)
NRB
ತನ್ನ ವಿರುದ್ಧ ಮಾಟ-ಮಂತ್ರ ಮಾಡಲಾಗುತ್ತಿದ್ದು, ತನಗೆ ಜೀವ ಬೆದರಿಕೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಇದೀಗ ಅಕ್ರಮ ಪಡಿತರ ಚೀಟಿ ತಡೆಗೆ ಮುಂದಾದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆಗೂ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ ಎಂದು ಮೂಲವೊಂದು ತಿಳಿಸಿದೆ.

ಅಕ್ರಮ ಅಡುಗೆ ಅನಿಲ ಮತ್ತು ಅಕ್ರಮ ಪಡಿತರ ಚೀಟಿ ತಡೆಗೆ ಕ್ರಮ ಕೈಗೊಳ್ಳಲು ಸಚಿವೆ ಶೋಭಾ ಕರಂದ್ಲಾಜೆ ಮುಂದಾಗಿರುವುದು ಗ್ಯಾಸ್ ಕಾಳಸಂತೆಕೋರರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎನ್ನಲಾಗಿದೆ. ಅಕ್ರಮ ಪಡಿತರ ಚೀಟಿ ತಡೆಗೆ ಮುಂದಾದ್ರೆ ಮಾಲೇಗಾಂವ್‌ನ ಹೆಚ್ಚುವರಿ ಡಿಸಿಯಾಗಿದ್ದ ಯಶವಂತ್ ಸೋನಾವಾನೆಗೆ ಬಂದ ಗತಿ ನಿಮಗೂ ಬರುತ್ತೆ ಎಚ್ಚರಿಕೆ ಎಂದು ಬೆದರಿಕೆ ಕರೆಗಳು ಬಂದಿವೆ ಎಂದು ಉನ್ನತ ಮೂಲವೊಂದು ಹೇಳಿದೆ.

ತೈಲ ಕಲಬೆರಕೆ ಮಾಫಿಯಾದ ವಿರುದ್ಧ ಸಮರ ಸಾರಿದ್ದ ಮಾಲೇಗಾಂವ್‌ನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಯಶವಂತ್ ಸೋನಾವಾನೆ ಅವರನ್ನು ತೈಲ ಮಾಫಿಯಾ ಬರ್ಬರವಾಗಿ ಇತ್ತೀಚೆಗೆ ಹತ್ಯೆಗೈದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ರಾಜ್ಯದಲ್ಲಿ ಸುಮಾರು ಆರು ಕೋಟಿ ಇಪ್ಪತ್ತೈದು ಲಕ್ಷ ಮಂದಿ ಜನಸಂಖ್ಯೆ ಇದೆ. ಇದರಲ್ಲಿ 1 ಕೋಟಿ ಆರು ಲಕ್ಷ ಕುಟುಂಬಗಳಿವೆ. ಆದರೆ ಒಂದು ಕೋಟಿ 50 ಲಕ್ಷ ಪಡಿತರ ಚೀಟಿ ವಿತರಣೆಯಾಗಿದೆ. ಸುಮಾರು 50 ಲಕ್ಷ ಪಡಿತರ ಚೀಟಿ ಹೆಚ್ಚುವರಿಯಾಗಿ ವಿತರಣೆಯಾಗಿರುವ ಅಂಶ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಗಮನಕ್ಕೆ ಬಂದಿದೆ. ಈ ಪಡಿತರ ಚೀಟಿಯನ್ನು ಗ್ಯಾಸ್ ಸಿಲಿಂಡರ್ ಪಡೆಯಲು ಉಪಯೋಗಿಸಲಾಗುತ್ತಿದೆ.

ಇದೀಗ ಅಕ್ರಮ ಪಡಿತರ ಚೀಟಿ ಮತ್ತು ಅಕ್ರಮ ಸಿಲಿಂಡರ್ ಜಾಲದ ವಿರುದ್ಧ ಸಮರ ಸಾರಿರುವ ಸಚಿವೆ ಶೋಭಾ ಕರಂದ್ಲಾಜೆಗೆ ಗ್ಯಾಸ್ ಕಾಳಸಂತೆಕೋರರಿಂದ ಜೀವ ಬೆದರಿಕೆ ಬರುತ್ತಿವೆ ಎಂದು ಶಂಕಿಸಲಾಗಿದೆ.
ಸಂಬಂಧಿತ ಲೇಖನಗಳು