ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸದನದಲ್ಲಿ ಗದ್ದಲ ಪ್ರಕರಣ; ಸಿದ್ದು ಸೇರಿ ನಾಲ್ವರಿಗೆ ನೋಟಿಸ್ (Vidhana sowdha | Siddaramaiah | Congress | BJP | Yeddyurappa,)
ವಿಧಾನಸಭೆಯಲ್ಲಿ ನಡೆದ ಗಣಿ ಗದ್ದಲಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕರಾದ ಎ.ಮಂಜು, ಎಂ.ಬಿ.ಪಾಟೀಲ್, ದಿನೇಶ್ ಗುಂಡೂ ರಾವ್ ಅವರಿಗೆ ಶಾಸಕ ಶ್ರೀಕಾಂತ್ ಕುಲಕರ್ಣಿ ನೇತೃತ್ವದ ಸದನ ಸಮಿತಿ ನೋಟಿಸ್ ಜಾರಿಗೊಳಿಸಿದೆ.

ಕುಲಕರ್ಣಿ ನೇತೃತ್ವದ ಸದನ ಸಮಿತಿ ಸೋಮವಾರ ನಾಲ್ಕನೇ ಸಭೆ ಸೇರಿ ವಿಧಾನಸಭೆಯಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷ ಸದಸ್ಯರ ನಡುವಿನ ರಂಪಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನೋಟಿಸ್ ಜಾರಿ ಮಾಡಿದೆ.

ಫೆಬ್ರುವರಿ 19ರಂದು ನಡೆಯುವ ಸದನ ಸಮಿತಿ ಮುಂದೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ, ಇಲ್ಲವೇ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ.

ಬಿಜೆಪಿ ಕಂಪ್ಲಿ ಶಾಸಕ ನಾಗೇಂದ್ರಬಾಬು ಅವರು ನೀಡಿದ ದೂರಿನ ಸಂಬಂಧ ವಿಚಾರಣೆ ನಡೆಸಲು ಸಭಾಧ್ಯಕ್ಷ ಬೋಪಯ್ಯನವರು ಸದನ ಸಮಿತಿ ರಚಿಸಿದ್ದರು.

ಗೊಂದಲಕ್ಕೆ ಕಾರಣವಾಗಿರುವ ಬಿಜೆಪಿ ಶಾಸಕರಿಗೆ ನೋಟಿಸ್ ನೀಡಿ ವಿವರಣೆ ಪಡೆಯುವಂತೆ ಕಾಂಗ್ರೆಸ್ ಶಾಸಕರು ನೀಡಿದ್ದ ದೂರಿನ ಸಂಬಂಧ ಘಟನಾವಳಿಗಳ ದೃಶ್ಯ ಸೆರೆ ಹಿಡಿದಿದ್ದ ಸುದ್ದಿ ವಾಹಿನಿಗಳಿಗೆ ಸಿ.ಡಿ ಕಳುಹಿಸುವಂತೆ ಶ್ರೀಕಾಂತ್ ಕುಲಕರ್ಣಿಯವರು ಪತ್ರ ಬರೆದು ಮನವಿ ಮಾಡಿದ್ದರು.

ಆದರೆ ಸುದ್ದಿವಾಹಿನಿಗಳು ಸೆರೆ ಹಿಡಿದಿದ್ದ ಘಟನಾವಳಿಗಳ ದೃಶ್ಯದ ಸಿ.ಡಿ ಕಳುಹಿಸದಿರುವುದರಿಂದ ಬಿಜೆಪಿ ಶಾಸಕರಿಗೆ ನೋಟಿಸ್ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ಮೂಲವೊಂದು ತಿಳಿಸಿದೆ.
ಇವನ್ನೂ ಓದಿ