ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯ ಪೊಲೀಸರಿಗೆ ಆಸ್ಟ್ರೇಲಿಯಾ ತರಬೇತಿ: ಸರಕಾರ (Police | Austrelia | training | state govt | Karnataka)
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಎಸ್.ಎಸ್.ರೇವಣ್ಣ ಅವರು ಸೇರಿದಂತೆ ರಾಜ್ಯದ ಒಟ್ಟು 7 ಐಪಿಎಸ್ ಅಧಿಕಾರಿಗಳನ್ನು ವಿಶೇಷ ತರಬೇತಿಗಾಗಿ ಆಸ್ಟ್ರೇಲಿಯಾಕ್ಕೆ ಕಳುಹಿಸಿಕೊಡಲು ಸರಕಾರ ನಿರ್ಧರಿಸಿದೆ.

ಐಪಿಎಸ್ ದರ್ಜೆಯ ಅಧಿಕಾರಿಗಳಾದ ಎಚ್.ಎಸ್.ರೇವಣ್ಣ, ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಡಿಸಿಪಿ ಟಿ.ಜಿ.ಕೃಷ್ಣ ಭಟ್, ಹೇಮಂತ್ ನಿಂಬಾಳ್ಕರ್, ದೇವಜ್ಯೋತಿರೇ, ಶಶಿಕುಮಾರ್, ಮಧುಕರ್ ಪವಾರ್, ಎಚ್.ಎಸ್.ವೆಂಕಟೇಶ್ ಅವರು ಫೆ.14ರಿಂದ ಏ.ರವರೆಗೆ ವಿಶೇಷ ತರಬೇತಿ ಪಡೆಯಲಿರುವ ಪೊಲೀಸ್ ಅಧಿಕಾರಿಗಳು.

ಕೇಂದ್ರ ಸರಕಾರದ ತೀರ್ಮಾನದಂತೆ ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಮಾರ್ಗದರ್ಶನದಲ್ಲಿ ಈ ಅಧಿಕಾರಿಗಳನ್ನು ಉನ್ನತ ತರಬೇತಿಗೆ ಕಳುಹಿಸಿಕೊಡಲಿದೆ.

ವಿಶೇಷ ತರಬೇತಿಗೆ ಆಯ್ಕೆಯಾಗಿರುವ ಈ ಅಧಿಕಾರಿಗಳ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡುವ ಮುನ್ನ ಫೆ.14ರಿಂದ ಮಾ.26ರವರೆಗೆ ಹೈದ್ರಬಾದ್‌ನಲ್ಲಿರುವ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ವಿಶೇಷ ತರಬೇತಿ ಕಾರ್ಯ ಪೂರೈಸುವರು. ನಂತರ ಈ ತಂಡ ಮಾ.28ರಿಂದ ಏ.8ರವರೆಗೆ ಆಸ್ಟ್ರೇಲಿಯಾದ ಚಾರ್ಲ್ಸ್ ಸ್ಟರ್ಟ್ ವಿಶ್ವವಿದ್ಯಾನಿಯಲದಲ್ಲಿ ಉನ್ನತ ಪೊಲೀಸ್ ತರಬೇತಿ ಪಡೆಯಲಿದ್ದಾರೆ.
ಇವನ್ನೂ ಓದಿ