ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೇಮಾಮಾಲಿನಿ ವಿದೇಶಿ ಮಹಿಳೆಯಲ್ಲ: ಈಶ್ವರಪ್ಪ ಸಮರ್ಥನೆ (Hema malini | BJP | Ishwarappa | Congress | Yeddyurappa | Raja sabha)
NRB
ರಾಜ್ಯದಿಂದ ರಾಜ್ಯಸಭೆಗೆ ನಟಿ ಹೇಮಾ ಮಾಲಿನಿಯನ್ನು ಆಯ್ಕೆ ಮಾಡಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಬಲವಾಗಿ ಸಮರ್ಥಿಸಿಕೊಂಡಿದ್ದು, ಕಲಾವಿದರು, ಸಾಹಿತಿಗಳನ್ನು ಒಂದು ಭಾಷೆ ಅಥವಾ ಪ್ರದೇಶಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

ಭಾನುವಾರ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಹೇಮಾಮಾಲಿನಿ ಬೇರೆ ರಾಜ್ಯದವರಾಗಿರಬಹುದು. ಆದರೆ ಅವರು ಭಾರತೀಯರಲ್ಲವಾ ಎಂದು ಪ್ರಶ್ನಿಸಿದರು.

ನಮ್ಮ ರಾಜ್ಯದವರಾಗಿದ್ದ ಎಸ್.ಆರ್.ಬೊಮ್ಮಾಯಿ, ಜಾರ್ಜ್ ಫರ್ನಾಂಡಿಸ್ ಅವರು ಬೇರೆ ರಾಜ್ಯದಿಂದ ಚುನಾಯಿತರಾಗಿದ್ದಾರೆ ಎಂದು ಉಲ್ಲೇಖಿಸುವ ಮೂಲಕ ಹೇಮಾಮಾಲಿನಿ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಆ ನಿಟ್ಟಿನಲ್ಲಿ ಹೇಮಾಮಾಲಿನಿ ಸೋಮವಾರ ಮಧ್ಯಾಹ್ನ ಅಧಿಕೃತವಾಗಿ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಜರಿದ್ದರು.

ಅಲ್ಲದೇ ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಾಗಬೇಕು. ಈ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಬೇಕು ಎಂದು ಈ ಸಮಾವೇಶದ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಖಚಿತ ಎಂದು ಈ ಸಂದರ್ಭದಲ್ಲಿ ಹೇಳಿದರು.

ರಾಜ್ಯಸಭೆಗೆ ಸಾಹಿತಿ ಮರುಳಸಿದ್ದಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ:
ರಾಜ್ಯದಿಂದ ರಾಜ್ಯಸಭೆಗೆ ಕನಸಿನ ಕನ್ಯೆ, ನಟಿ ಹೇಮಾಮಾಲಿನಿ ಅವರನ್ನು ಬಿಜೆಪಿ ಅಖಾಡಕ್ಕೆ ಇಳಿಸಿದ ಬೆನ್ನಲ್ಲೇ, ರಾಜ್ಯದ ಸಾಹಿತಿ ಮರುಳಸಿದ್ದಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಮರುಳಸಿದ್ದಪ್ಪ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅವರು ಸೋಮವಾರ ರಾಜ್ಯಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಅಪ್ರಸ್ತುತ. ರಾಜ್ಯದ ಸ್ವಾಭಿಮಾನದ ಪ್ರತೀಕವಾಗಿ ನಾನು ಕನ್ನಡಿಗನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಅಲ್ಲದೇ ರಾಜಕೀಯ ವ್ಯವಸ್ಥೆಯನ್ನು ಶುಭ್ರಗೊಳಿಸಲು ತಾನು ಅಖಾಡಕ್ಕೆ ಇಳಿದಿರುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.
ಇವನ್ನೂ ಓದಿ