ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಶ್ವ ಕನ್ನಡ ಸಮ್ಮೇಳನ; ವಿಧಾನ ಮಂಡಲ ಕಲಾಪಕ್ಕೂ ಕತ್ತರಿ (Vishwa Kannada Sammelana | Vidhana Mandala | Karnataka | BJP)
ಗುರುವಾರ ಬಜೆಟ್ ಮಂಡನೆಯೊಂದಿಗೆ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭಗೊಂಡಿದೆ. ಈ ಬಾರಿ ಅದು ಸುಗಮವಾಗಿ ನಡೆಯುವುದು ಕೂಡ ಬಹುತೇಕ ಖಚಿತ. ಆದರೆ ಕಲಾಪ ಮಾತ್ರ ಮೊಟಕುಗೊಳ್ಳಲಿದೆ.

ಇದಕ್ಕೆ ಕಾರಣ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನ. ಶಾಸಕರು ಸಮ್ಮೇಳನದಲ್ಲಿ ಭಾಗವಹಿಸಬೇಕಾಗಿರುವುದರಿಂದ ಕಲಾಪಕ್ಕೆ ಒಂದು ವಾರಗಳ ಕತ್ತರಿ ಹಾಕಲು ನಿರ್ಧರಿಸಲಾಗಿದೆ.

ಫೆಬ್ರವರಿ 28ರ ಸೋಮವಾರದಿಂದ ಅಧಿಕೃತವಾಗಿ ವಿಧಾನ ಮಂಡಲದ ಅಧಿವೇಶನ ಆರಂಭವಾಗುತ್ತದೆ. ಈ ಸಂಬಂಧ ವಿಧಾನಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯ ಕರೆದಿದ್ದ ಸಭೆಯಲ್ಲಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ.

ಈ ಹಿಂದಿನ ಅಧಿವೇಶನದಲ್ಲಿ ಸದನ ಸಲಹಾ ಸಮಿತಿಯ ಸಭೆಗೂ ಪ್ರತಿಪಕ್ಷಗಳ ಮುಖಂಡರು ಗೈರು ಹಾಜರಾಗಿದ್ದರು. ಸ್ಪೀಕರ್ ವಿರುದ್ಧದ ತಮ್ಮ ಅಸಮಾಧಾನವನ್ನು ಇಲ್ಲಿ ತೋರಿಸಲಾಗಿತ್ತು. ಆದರೆ ಈ ಬಾರಿ ಕೊಂಚ ಬದಲಾವಣೆ ಪ್ರತಿಪಕ್ಷಗಳಲ್ಲಿ ಕಂಡು ಬಂದಿದೆ.

ಅದರ ಅರ್ಥ ಸರಕಾರದ ವಿರುದ್ಧದ ತಮ್ಮ ಹೋರಾಟವನ್ನು ಕೈ ಬಿಟ್ಟಿದ್ದೇವೆ ಎಂದಲ್ಲ. ಕಲಾಪಗಳಲ್ಲಿ ಭಾಗವಹಿಸುತ್ತೇವೆ. ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ನಿಯಮಾವಳಿಗಳಂತೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತೇವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಹೇಳಿಕೊಂಡಿವೆ.

ಈ ಹಿಂದೆ ನಿಗದಿಯಾಗಿದ್ದಂತೆ ಕಲಾಪ 15 ದಿನಗಳ ಕಾಲ ನಡೆಯುತ್ತಿಲ್ಲ. ಮಾರ್ಚ್ 11ರಿಂದ ವಿಶ್ವ ಕನ್ನಡ ಸಮ್ಮೇಳನ ಆರಂಭವಾಗುವುದರಿಂದ, ಮಾರ್ಚ್ 10ಕ್ಕೆ ಕಲಾಪ ಕೊನೆಗೊಳ್ಳುತ್ತದೆ. ಆದರೂ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ. ಇನ್ನೊಮ್ಮೆ ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

ಈ ಹಿಂದಿನ ತೀರ್ಮಾನದಂತೆ ಮಾರ್ಚ್ 17ರವರೆಗೆ ಕಲಾಪ ನಡೆಯಬೇಕಿತ್ತು.
ಇವನ್ನೂ ಓದಿ