ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯಸಭೆ; ಹೇಮಾಗೆ ಜಯದ 'ಮಾಲೆ'- ಮರುಳಸಿದ್ದಪ್ಪಗೆ ಸೋಲು (Rajya sabha | Hema malini | Marulasiddappa | Congress | JDS | BJP)
IFM
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ನಟಿ ಹೇಮಾಮಾಲಿನಿ ನಿರೀಕ್ಷೆಯಿಂತೆ ಭರ್ಜರಿ ಜಯಗಳಿಸಿದ್ದು, ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸಾಹಿತಿ ಡಾ.ಮರುಳುಸಿದ್ದಪ್ಪ ಸೋಲನುಭವಿಸಿದ್ದಾರೆ.

ರಾಜಶೇಖರಮೂರ್ತಿ ಅವರ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕನಸಿನ ಕನ್ಯೆ ನಟಿ ಹೇಮಾಮಾಲಿನಿ ಸ್ಪರ್ಧಿಸಿದ್ದರು. ಅಲ್ಲದೇ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಹಿತಿ ಡಾ.ಮರುಳಸಿದ್ದಪ್ಪ ಅವರನ್ನು ಕಣಕ್ಕಿಳಿಸಿತ್ತು. ಇಂದು ಬೆಳಿಗ್ಗೆ ರಾಜ್ಯಸಭಾ ಚುನಾವಣೆಯ ಮತದಾನ ನಡೆದಿತ್ತು.

ಚುನಾವಣೆಯಲ್ಲಿ ನಟಿ ಹೇಮಾಮಾಲಿನಿ 106 ಮತ ಪಡೆದು ಜಯಭೇರಿ ಬಾರಿಸಿದ್ದರೆ, ಸಾಹಿತಿ ಡಾ. ಮರುಳಸಿದ್ದಪ್ಪ 94 ಮತ ಪಡೆದು ಸೋಲನ್ನನುಭವಿಸಿದ್ದಾರೆ. ಉಳಿದ ಐದು ಮತಗಳು ತಿರಸ್ಕೃತಗೊಂಡಿರುವುದಾಗಿ ರಾಜ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಹಾಲಿ ವಿಧಾನಸಭೆಯಲ್ಲಿ ಒಟ್ಟು ಸದಸ್ಯರ ಬಲ 206 ಇದೆ. ಈ ಪೈಕಿ ಬಿಜೆಪಿ 105 ಸದಸ್ಯರನ್ನು ಹೊಂದಿದೆ. ಇವರಲ್ಲದೆ, ಒಂದು ಪಕ್ಷೇತರ ಹಾಗೂ ಸ್ಪೀಕರ್ ಕೆಜಿ ಬೋಪಯ್ಯ ಮತ ಸೇರಿ ಬಿಜೆಪಿ 107 ಮತಗಳ ಬಲ ಹೊಂದಿದೆ. ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ 71 ಹಾಗೂ ಜೆಡಿಎಸ್ 27 ಸೇರಿ ಒಟ್ಟು 98 ಮತಗಳನ್ನು ಹೊಂದಿತ್ತು.

ನಟಿ ಹೇಮಾಮಾಲಿನಿ ತಮಿಳುನಾಡು ಮೂಲದವರಾಗಿದ್ದು, ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡುವುದು ಸರಿಯಲ್ಲ ಎಂದು ಸಾಹಿತಿಗಳು ಸೇರಿದಂತೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ನಟಿ ಹೇಮಾಮಾಲಿನಿ ಅಭ್ಯರ್ಥಿತನವನ್ನು ಬಿಜೆಪಿ ಬಲವಾಗಿ ಸಮರ್ಥಿಸಿಕೊಂಡು ಕಣಕ್ಕಿಳಿಸಿತ್ತು. ಆದರೆ ಕನ್ನಡದ ಸ್ವಾಭಿಮಾನದ ಪ್ರಶ್ನೆ ಎಂಬಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಹಿತಿ ಡಾ.ಮರುಳಸಿದ್ದಪ್ಪ ಅವರನ್ನು ಕಣಕ್ಕಿಳಿಸಿತ್ತು. ಆದರೆ ಸಂಖ್ಯಾಬಲದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿರೀಕ್ಷಿತವಾಗಿತ್ತು. ಆ ನಿಟ್ಟಿನಲ್ಲಿ ನಟಿ ಹೇಮಾಮಾಲಿನಿ ಮತ್ತೊಮ್ಮೆ ರಾಜ್ಯಸಭೆ ಪ್ರವೇಶಿಸಿದ್ದಾರೆ.
ಇವನ್ನೂ ಓದಿ