ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಛೇ...ನಾವು ಆಪರೇಷನ್ ಕಮಲ ನಡೆಸಿಲ್ಲ: ಯಡಿಯೂರಪ್ಪ (BJP | Yeddyurappa | Congress | JDS | Sanganna karadi | Operation kamala)
WD
'ನಾವು ಆಪರೇಷನ್ ಕಮಲ ನಡೆಸಿಯೇ ಇಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿನ ಒಳಜಗಳದಿಂದ ಬೇಸತ್ತು ಬಿಜೆಪಿಗೆ ಸೇರುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡುವ ಮೂಲಕ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಂಗೀಕುಸ್ತಿ ಮುಂದುವರಿದಂತಾಗಿದೆ.

ಬಿಜೆಪಿಗೆ ಯಾರೂ ಸೇರುವುದು ಬೇಡ ಅಂದ್ರೂ ಕೇಳಲ್ಲ. ನಿಜಕ್ಕೂ ನಮಗೇನೂ ಶಾಸಕರ ಅಗತ್ಯವಿಲ್ಲ. ಆದರೆ ಬೇರೆ ಪಕ್ಷ ತೊರೆದು ಬಂದವರನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಸಮಜಾಯಿಷಿ ನೀಡಿದರು.

ಬಿಜೆಪಿ ಆಪರೇಷನ್ ಕಮಲ ತಂತ್ರ ಮುಂದುವರಿಸಿ ಪ್ರತಿಪಕ್ಷಗಳ ಶಾಸಕರನ್ನು ಖರೀದಿಸುತ್ತಿದೆ ಎಂಬ ಆರೋಪ ಸರಿಯಲ್ಲ. ಅವರ ಪಕ್ಷದೊಳಗಿನ ಆಂತರಿಕ ಜಗಳದಿಂದ ಬೇಸತ್ತು ಶಾಸಕರು ಬರುತ್ತಿದ್ದಾರೆ. ಅದಕ್ಕೆ ನಾನೇನು ಮಾಡಲಿ. ಎಲ್ಲದರಲ್ಲೂ ಹುಳುಕು ಹುಡುಕುವವರಿಗೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಎರಡು ದಿನಗಳ ಹಿಂದಷ್ಟೇ ಕೊಪ್ಪಳ ಕ್ಷೇತ್ರದ ಜೆಡಿಎಸ್ ಶಾಸಕ ಸಂಗಣ್ಣ ಕರಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಾರ್ಚ್ 9ರಂದು ಬಿಜೆಪಿಗೆ ಸೇರುವುದಾಗಿ ಘೋಷಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರುವುದಾಗಿ ಕರಡಿ ತಿಳಿಸಿದ್ದರು. ಅಲ್ಲದೇ ಆಪರೇಷನ್ ಕಮಲದ ವಿಚಾರ ಶುಕ್ರವಾರ ವಿಧಾನಮಂಡಲ ಮತ್ತು ವಿಧಾನಪರಿಷತ್ ಕಲಾಪದಲ್ಲಿಯೂ ಪ್ರತಿಧ್ವನಿಸಿ ಸಾಕಷ್ಟು ಕೋಲಾಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ-ಖರ್ಗೆ:
ಬಿಜೆಪಿಯೇತರ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡದೆ, ಪರೋಕ್ಷವಾಗಿ ಕಿರುಕುಳ ನೀಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಸೆಳೆದುಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತಾರೂಢ ಬಿಜೆಪಿ ಪಕ್ಷ ಅನುಸರಿಸುತ್ತಿರುವ ಆಪರೇಶನ್ ಕಮಲ ತಂತ್ರ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕಿಡಿಕಾರಿದ ಅವರು,ಹಗರಣ ಹಾಗೂ ಭ್ರಷ್ಟಾಚಾರದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಆದರೂ ಕುರ್ಚಿಯ ಆಸೆಯಿಂದ ಬಿಜೆಪಿ ಸಂವಿಧಾನ ವಿರೋಧಿ ಕೆಲಸದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಇವನ್ನೂ ಓದಿ