ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲೈಂಗಿಕ ಕಿರುಕುಳ ನೀಡುವವರ ಕೈ-ಕಾಲು ಕತ್ತರಿಸ್ಬೇಕು: ಭಾರತಿ ಶೆಟ್ಟಿ (Mysore V V | Sex scandal | VS Acharya | Police | Suicide attempt)
'ಲೈಂಗಿಕ ಕಿರುಕುಳ ನೀಡುವವರ ಕೈ-ಕಾಲು ಕತ್ತರಿಸಿ ಬದುಕಲು ಬಿಡಬೇಕು'...ಹೀಗೆ ವಿಧಾನಪರಿಷತ್ ಕಲಾಪದಲ್ಲಿ ಆಕ್ರೋಶ ವ್ಯಕ್ತಪಡಿಸಿದವರು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ.

ಮೈಸೂರು ವಿವಿಯಲ್ಲಿನ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಸರಿತಾ ಎಂಬಾಕೆಗೆ ಜೀವಶಾಸ್ತ್ರ ವಿಭಾಗದ ಪ್ರೊ. ಶಿವಬಸವಯ್ಯ ಅವರು ಲೈಂಗಿಕ ಕಿರುಕುಳ ನೀಡುತ್ತಿರುವುದರಿಂದ ಮನನೊಂದು ಶನಿವಾರ ರಾತ್ರಿ ನಿದ್ದೆ ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಸರಿತಾ ಅವರು ವಿವಾಹಿತರಾಗಿದ್ದು ವಿಜಯನಗರ 3ನೇ ಹಂತದಲ್ಲಿ ವಾಸವಿದ್ದು, ಇವರಿಗೆ ಒಂದು ಹೆಣ್ಣು ಮಗುವಿದೆ. ಪತಿ ವಿಜಯಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಶಿವಬಸವಯ್ಯ ಅವರ ಮಾರ್ಗದರ್ಶನದಲ್ಲಿ ಸರಿತಾ ಸಂಶೋಧನೆ ನಡೆಸುತ್ತಿದ್ದಾರೆ.

ಈ ಘಟನೆ ಸೋಮವಾರ ಮೇಲ್ಮನೆಯಲ್ಲಿನ ಕಲಾಪದ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಭಾರತಿ ಶೆಟ್ಟಿ, ಇಂತಹ ಕಾಮುಕರ ಕೈ-ಕಾಲು ಕತ್ತರಿಸಿ ಮನೆಯಲ್ಲಿ ಕೂರಿಸಬೇಕು. ಯಾಕೆಂದರೆ ಇಂತಹವರನ್ನು ಕೆಲಸದಿಂದ ಅಮಾನತು ಮಾಡಿದ್ರೆ, ಅವರು ಮತ್ತೆ ಅದೇ ಕಾಲೇಜಿಗೆ ಅಥವಾ ಮತ್ತೊಂದು ಕಾಲೇಜಿಗೆ ಸೇರಿಕೊಂಡ ಮೇಲೂ ಅದೇ ಚಾಳಿ ಮುಂದುವರಿಸುತ್ತಾರೆ. ಹಾಗೆ ಆಗಬಾರದು ಅದಕ್ಕೆ ಕಠಿಣ ಶಿಕ್ಷೆಯೇ ಮದ್ದು ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.

ಮೈಸೂರು ವಿವಿ ಪ್ರೊ.ಶಿವಬಸವಯ್ಯ ವಿರುದ್ಧ ಕಿಡಿಕಾರಿದ ಭಾರತಿ ಶೆಟ್ಟಿಯವರು, ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರೊಫೆಸರ್ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಆಗ ಸದನದಲ್ಲಿ ಪಕ್ಷಬೇಧ ಮರೆತು ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ತದನಂತರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ವಿ.ಎಸ್.ಆಚಾರ್ಯ, ಘಟನೆ ಕುರಿತಂತೆ ನಾಳೆ ಸಂಜೆಯೊಳಗೆ ಪೂರ್ಣ ಪ್ರಮಾಣದಲ್ಲಿ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವಂತೆ ಕೂಡಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಸವಿತಾ ಪ್ರೊ.ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಪ್ರಕರಣದ ಬಗ್ಗೆ ಕುಲಪತಿ ಪ್ರೊ. ತಳವಾರ್ ಅವರಿಗೆ ದೂರು ನೀಡಲಾಗಿತ್ತು. ಆದರೆ ಅವರು ನೋಡು ಒಂದು ಪಡೆಯಬೇಕಾದರೆ, ಒಂದು ಕಳೆದುಕೊಳ್ಳಬೇಕು ಎಂದು ಹೇಳಿ ತಾವು ಈ ಬಗ್ಗೆ ಮೂಗು ತೂರಿಸುವುದಿಲ್ಲ ಎಂದಿದ್ದರಂತೆ. ಇದೀಗ ತಳವಾರ್ ವಿರುದ್ಧ ಕೂಡ ದೂರು ದಾಖಲಿಸಿದ್ದಾರೆ. ಏತನ್ಮಧ್ಯೆ, ತಾನು ಆ ರೀತಿ ಹೇಳಿಲ್ಲ. ಇದು ಸತ್ಯಕ್ಕೆ ದೂರವಾದ ಆರೋಪ ಎಂದು ತಳವಾರ್ ಅಲವತ್ತುಕೊಂಡಿದ್ದಾರೆ.
ಇವನ್ನೂ ಓದಿ