ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೈತರ ಗೋಳು ಕೇಳುವವರಿಲ್ಲ; ಪುಟ್ಟಣ್ಣಯ್ಯ ವಿಷಾದ (World Kannada Meet | Karnataka | Belagavi | Government)
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕೃಷಿ-ಸಾಧನೆ-ಸವಾಲು ವಿಚಾರಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ. ಎಸ್. ಪುಟ್ಟಣ್ಣಯ್ಯ, ಅನ್ನದಾತನ ಗೋಳು ಕೇಳುವವರೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ರೈತರ ಭೂಮಿಯನ್ನೇ ವಶಪಡಿಸುತ್ತಿರುವ ಸರಕಾರ ಅವರನ್ನು ಕಂಗಾಲು ಮಾಡುತ್ತಿದೆ. ರೈತನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಸರಕಾರದ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಸಿದರು.

ಇದೇ ಸಂದರ್ಭದಲ್ಲಿ ರೈತರ ಸಂಕಷ್ಟದ ಬಗ್ಗೆ ಸಾಹಿತಿಗಳು ಬರೆಯುವ ಮೂಲಕ ಸರಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು. ರೈತರ ಸಂಕಷ್ಟಗಳ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಾ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ರೈತರ ಸವಾಲುಗಳ ಬಗ್ಗೆ ಮುಖ್ಯ ವೇದಿಕೆಯಲ್ಲೇ ಚರ್ಚೆಯಾಗಬೇಕಿತ್ತು. ಆದರೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ರೈತರ ಸಮಸ್ಯೆಗೆ ಸಂಬಂಧಿಸಿದ ಗೋಷ್ಠಿ ನಡೆಸಲು ಸರಕಾರಕ್ಕೆ ಇಷ್ಟವಿರಲಿಲ್ಲ. ಇದಕ್ಕಾಗಿಯೇ ಮುಖ್ಯ ವೇದಿಕೆಯಿಂದ ಯಾರೂ ಸೇರದಂತಹ ಗಾಂಧಿ ಭವನದಲ್ಲಿ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ