ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೌಡ್ರ ಜತೆ 'ಕೈ' ಜೋಡಿಸಿದ್ರೆ ಸರ್ವನಾಶ: ಮುಖ್ಯಮಂತ್ರಿ ಎಚ್ಚರಿಕೆ (Devegowda | Yeddyurappa | Karnataka | Prerana Trust | JDS | Congress)
WD
ರಾಷ್ಟ್ರೀಯ ಪಕ್ಷವೊಂದು ತನ್ನ ನೆಲೆಯನ್ನು ಬಲಪಡಿಸಿಕೊಳ್ಳುವುದಕ್ಕಾಗಿ ದೇವೇಗೌಡರ ಕುಟುಂಬದ ಜೊತೆ ಕೈಜೋಡಿಸುತ್ತದೆ ಎಂದಾದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅರುವತ್ತು ವರ್ಷ ಇತಿಹಾಸವಿರುವ ಕಾಂಗ್ರೆಸ್ಸನ್ನು ಮೂದಲಿಸಿದ್ದಾರೆ.

ಪ್ರೇರಣಾ ಟ್ರಸ್ಟ್‌ಗೆ ಉದ್ಯಮಿಗಳ ದೇಣಿಗೆ ನೀಡಿದ್ದನ್ನು ಹಗರಣ ಎನ್ನುತ್ತಾ ಗದ್ದಲ ಎಬ್ಬಿಸುತ್ತಿದ್ದ ಪ್ರತಿಪಕ್ಷಗಳು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಕೋಲಾಹಲ ನಡೆಸಿ ಸದನದ ವೇದಿಕೆ ಬಳಿ ಬಂದು ಕೂಗಾಡುತ್ತಿದ್ದ ಸಂದರ್ಭದಲ್ಲಿ ರೋಷದಿಂದ ಮಾತನಾಡಿದ ಮುಖ್ಯಮಂತ್ರಿ, ದೇವೇಗೌಡ ಮತ್ತು ಕುಟುಂಬದ ವಿರುದ್ಧ ವಾಕ್ಪ್ರಹಾರ ನಡೆಸಿದರು.

ಈಗಾಗಲೇ ರಾಜ್ಯವನ್ನು ಸರ್ವ ನಾಶ ಮಾಡಲು ಪಣತೊಟ್ಟಿರುವ ಎಚ್.ಡಿ.ದೇವೇಗೌಡರ ಕುಟುಂಬದ ಜೊತೆ ನೀವೂ ಕೈಜೋಡಿಸಿದರೆ, ರಾಜ್ಯಕ್ಕಿನ್ನು ಉಳಿಗಾಲವಿಲ್ಲ, ಸರ್ವನಾಶವೇ ಗತಿ ಎಂದು ಹೇಳಿದ ಮುಖ್ಯಮಂತ್ರಿ, ವಿನಾ ಕಾರಣ ಸರಕಾರದ ವಿರುದ್ಧ ಟೀಕೆ ಮಾಡಿದ ಕಾಂಗ್ರೆಸ್‌ಗೆ ಈಗಾಗಲೇ ನೆಲೆ ಇಲ್ಲದಂತಾಗಿದೆ. ನೀವೂ ಗೌಡ್ರ ಜೊತೆ ಸೇರಿಕೊಂಡ್ರೆ ರಾಜ್ಯವೂ ಸರ್ವನಾಶವಾಗುತ್ತದೆ. ರಾಷ್ಟ್ರೀಯ ಪಕ್ಷವಾಗಿ ಹೀಗೆ ಮಾಡುವುದು ನಿಮಗೇ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್‌ಗೆ ಅವರು ಎಚ್ಚರಿಸಿದರು.

ಗೌಡರು ತಮ್ಮ ದೇಣಿಗೆ ಅಕ್ರಮಗಳನ್ನು ಬಚ್ಚಿಟ್ಟುಕೊಂಡಿದ್ದೇಕೆ?
ಪ್ರೇರಣಾ ಶಿಕ್ಷಣ ಸಂಸ್ಥೆ ತಮ್ಮದು ಅಥವಾ ತಮ್ಮ ಕುಟುಂಬದ್ದು ಮಾತ್ರವೇ ಅಲ್ಲ. ಆದರ್ಶ ಡೆವಲಪರ್ಸ್, ಪಿಇಎಸ್ ಮುಖ್ಯಸ್ಥರು ಸೇರಿ ಹಲವರಿದ್ದಾರೆ. ಇದನ್ನು ಮುಚ್ಚಿಟ್ಟು, ನಮ್ಮ ವಿರುದ್ಧ ಆರೋಪ ಮಾಡುತ್ತಿರುವುದರ ಹಿಂದಿನ ಸಂಚು ನಿಮಗೆ ಅರ್ಥವಾಗಬೇಕು. ಒಂದು ಶಿಕ್ಷಣ ಸಂಸ್ಥೆಗೆ ನೀಡಿದ ದೇಣಿಗೆಯನ್ನು ಹಗರಣ ಎಂದು ಬಿಂಬಿಸಿದ ದೇವೇಗೌಡರು ಲೋಕಸಭೆಯ ಅಮೂಲ್ಯ ಸಮಯವನ್ನೂ ಹಾಳು ಮಾಡಿದ್ದು ನಾಚಿಕೆಗೇಡು ಎಂದ ಮುಖ್ಯಮಂತ್ರಿ, ದೇವೇಗೌಡರು ಮತ್ತು ಕುಟುಂಬಿಕರು ಮೈಸೂರಿನಲ್ಲಿ ಮೂಡಾ ವತಿಯಿಂದ 48 ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಕುಮಾರಸ್ವಾಮಿ ಖಾತೆಗೆ 167 ಕೋಟಿ ಅಕ್ರಮ ಹಣ ಜಮೆಯಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗಣಿ ಗುತ್ತಿಗೆ ನವೀಕರಿಸಿಯೂ ಲೂಟಿ ಮಾಡಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡದೆ, ದೇಣಿಗೆಯನ್ನು ಹಗರಣ ಎಂದು ಬಿಂಬಿಸಲು ನಾಚಿಕೆಯಾಗಬೇಕು ಎಂದರು.
ಇವನ್ನೂ ಓದಿ