ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಚ್‌ಡಿಕೆ ರಾಜ್ಯರಾಜಕಾರಣ ಪ್ರವೇಶ ರೇವಣ್ಣಗೆ ನಷ್ಟ! (Kumaraswamy | BJP | JDS | Yeddyurappa | Revanna | Channa pattana | Election)
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ರಾಜ್ಯರಾಜಕಾರಣಕ್ಕೆ ಪ್ರವೇಶಿಸಿದರೆ ಅದರಿಂದ ಜೆಡಿಎಲ್‌ಪಿ ನಾಯಕ ರೇವಣ್ಣನವರಿಗೆ ಮಾತ್ರ ನಷ್ಟವೇ ಹೊರತು ಮತ್ತಾರಿಗೂ ಅದರಿಂದ ಲಾಭ-ನಷ್ಟ ಇಲ್ಲ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್ ತಿಳಿಸಿದ್ದಾರೆ.

ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ, ಸಂಸದರಾಗಿ ರಾಜ್ಯದ ಅಭಿವೃದ್ಧಿಗೆ ದುಡಿಯಬೇಕಾಗಿದ್ದ ಅವರು ಕಳೆದ ಮೂರು ವರ್ಷಗಳಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಉರುಳಿಸಲು ವಾಮಮಾರ್ಗದ ತಂತ್ರಗಾರಿಕೆಯನ್ನು ರೂಪಿಸುವುದರಲ್ಲೇ ಹೆಚ್ಚು ಕಾರ್ಯಪ್ರವೃತ್ತರಾಗಿದ್ದದ್ದು ಈ ನಾಡಿನ ಪ್ರಜಾಪ್ರಭುತ್ವದ ದುರಂತ ಎಂದು ಕಿಡಿಕಾರಿದರು.

ಆಡಳಿತಾರೂಢ ಬಿಜೆಪಿ ಪಕ್ಷವನ್ನು ಸದಾ ಟೀಕಿಸುತ್ತಾ, ಸರಕಾರವನ್ನು ಉರುಳಿಸಲು ಸಂಚು ರೂಪಿಸುವ ಮೂಲಕ ತಮ್ಮ ಮುಖಕ್ಕೆ ತಾವೇ ಮಸಿ ಬಳಿದುಕೊಂಡಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದಿದ್ದರೆ ಸಂಸತ್‌ನಲ್ಲಿ ತಮ್ಮ ಸಾಮರ್ಥ್ಯ ತೋರಿಸಬೇಕಿತ್ತು. ಆದರೆ ಇದೀಗ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇದರಿಂದ ಅವರ ಸ್ವಾರ್ಥ, ದ್ವೇಷದ ರಾಜಕಾರಣ ಬಟಾಬಯಲಾಗಿದೆ ಎಂದು ದೂರಿದರು.

ಚನ್ನಪಟ್ಟಣ ಕ್ಷೇತ್ರದಿಂದ ಜಯಗಳಿಸುವುದು ಕುಮಾರಸ್ವಾಮಿಗೆ ಸುಲಭದ ಹಾದಿಯಲ್ಲ, ಒಂದು ವೇಳೆ ಅವರ ನಿರೀಕ್ಷೆಯಂತೆ ಜಯಗಳಿಸಿದರೂ ಕೂಡ ಇದರಿಂದ ಜೆಡಿಎಲ್‌ಪಿ ನಾಯಕ ರೇವಣ್ಣನವರಿಗೆ ನಷ್ಟ ವಿನಃ ಬೇರೆ ಯಾರಿಗೂ ಲಾಭ-ನಷ್ಟದ ಪ್ರಶ್ನೆಯಿಲ್ಲ ಎಂದು ಹೇಳಿದರು.
ಇವನ್ನೂ ಓದಿ