ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಂಗಳೂರಲ್ಲಿ ಭಿನ್ನರ ಮಸಲತ್ತು, ದೆಹಲಿಯಲ್ಲಿ ಸಿಎಂ ಸರ್ಕಸ್ಸು (BS Yeddyurappa | KS Eshwarappa | Anant Kumar | Jagadish Shetter)
ಹಿಂದಿನದು|ಮುಂದಿನದು
PR

ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರದ ಆಧಾರ ಸ್ತಂಭಗಳು ಈ ಬಾರಿ ಕೈ ಕೊಡುವುದು ಬಹುತೇಕ ಖಚಿತ. ದೇವರು ಬಂದರೂ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಬಿಡದೇ ಇರುವ ನಿರ್ಧಾರಕ್ಕೆ ಭಿನ್ನಮತೀಯ ತ್ರಿಮೂರ್ತಿಗಳು ಬಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರೇ ಈ ತ್ರಿಮೂರ್ತಿಗಳು. ಸೋಮವಾರ ಸಂಜೆ ಶೆಟ್ಟರ್ ನಿವಾಸದಲ್ಲಿ ಗಂಟೆಗಳಿಗೂ ಹೆಚ್ಚು ಕಾಲ ನಡೆದ ಈ ಗುಪ್ತ ಸಭೆಯಲ್ಲಿ ನಾಯಕತ್ವ ಬದಲಾವಣೆ ಎಂಬ ಏಕೈಕ ಅಜೆಂಡಾವನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳಲಾಯಿತು ಎಂದು ಈಶ್ವರಪ್ಪ ಬಣದ ಮೂಲಗಳು ಹೇಳಿವೆ.

ಆರೆಸ್ಸೆಸ್ ನಾಯಕ ಸಂತೋಷ್‌ಜೀ ಮುಂದಾಳುತ್ವದಲ್ಲಿ ನಡೆದ ಈ ಸಭೆಯಲ್ಲಿ ಕೇಳಿ ಬಂದಿರುವ ಪ್ರಮುಖ ಬೇಡಿಕೆ ಸಿಎಂ ಪದಚ್ಯುತಿ. ಬಿಜೆಪಿಯನ್ನು ಉಳಿಸಬೇಕಾದರೆ, ಕರ್ನಾಟಕದ ಬಿಜೆಪಿ ಸರಕಾರದ ಮಾನ ಮರ್ಯಾದೆ ರಕ್ಷಿಸಬೇಕಾದರೆ ಯಡಿಯೂರಪ್ಪ ತೊಲಗಲೇ ಬೇಕು. ಇಲ್ಲವಾದರೆ ಪರಿಸ್ಥಿತಿ ನಮ್ಮ ಕೈಯಲ್ಲಿರುವುದಿಲ್ಲ ಎಂಬುದನ್ನು ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡುವ ನಿಲುವಿಗೆ ಸಭೆಯಲ್ಲಿ ಒಮ್ಮತ ಸಿಕ್ಕಿದೆ.

ಹಾಗಾಗಿ ಮಂಗಳವಾರ ರಾತ್ರಿಯೇ ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡುವ ನಿರ್ಧಾರಕ್ಕೆ ಶಿಕ್ಷಣ ಸಚಿವ ಎಸ್.ಎಸ್. ರಾಮದಾಸ್, ಅರವಿಂದ ಲಿಂಬಾವಳಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮುಂತಾದವರು ಕೂಡ ಭಾಗವಹಿಸಿದ್ದ ಸಭೆ ಬಂದಿದೆ. ಸಭೆಗೆ ಬರದೇ ಇರುವ ರೆಡ್ಡಿ ಸಹೋದರರು ಕೂಡ ಈ ಭಿನ್ನರ ದೆಹಲಿ ನಿಯೋಗವನ್ನು ಸೇರಿಕೊಳ್ಳುವ ಭರವಸೆ ನೀಡಿದ್ದಾರೆ.

(ಮುಂದಿನ ನಾಲ್ಕು ಪುಟಗಳಲ್ಲಿ ಮುಂದುವರಿದಿದೆ)


ಹಿಂದಿನದು|ಮುಂದಿನದು