ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ವಿರುದ್ಧ ದೂರು ಕೊಟ್ಟ ಕೂಡ್ಲೆ ಸರಕಾರ ಬೀಳಲ್ಲ: ಆಚಾರ್ಯ (BJP | Yeddyurappa | VS Acharya | Ishwarappa | Ananth kumar)
PR
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದ ಕೂಡಲೇ ಸರಕಾರದ ಮುಂದುವರಿಕೆಗೆ ಮತ್ತು ಪ್ರಗತಿಗೆ ಯಾವುದೇ ತೊಂದರೆ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಸಮರ್ಥನೆ ನೀಡಿದ್ದಾರೆ.

ಪಕ್ಷದ ವರಿಷ್ಠರಿಗೆ ದೂರು ಕೊಡುವವರು ಕೊಡುತ್ತಾರೆ. ದೂರಿನ ಬಗ್ಗೆ ಹೈಕಮಾಂಡ್ ನೋಡಿಕೊಳ್ಳುತ್ತದೆ. ಅದರಿಂದ ಸರಕಾರಕ್ಕೆ ಅಥವಾ ಸರಕಾರದ ಸ್ಥಿರತೆಗೆ ಯಾವುದೇ ತೊಂದರೆ ಇಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಪ್ರಸ್ತುತ ಎಲ್ಲ ಕಡೆ ಆಂತರಿಕ ಕಲಹ, ಭಿನ್ನಮತ ಇದ್ದದ್ದೆ, ಯಾವುದೇ ಕ್ಷೇತ್ರ ಇದರಿಂದ ಮುಕ್ತವಾಗಿಲ್ಲ. ಕುಟುಂಬಗಳಲ್ಲೇ ಆಂತರಿಕ ಭಿನ್ನಾಭಿಪ್ರಾಯಗಳು ಇರುತ್ತವೆ. ಪಕ್ಷ ಎಂದ ಮೇಲೆ ಭಿನ್ನಮತ ಸಹಜ ಎಂದರು.

ಭಿನ್ನಮತದ ಬಗ್ಗೆಯಾಗಲಿ, ಭಿನ್ನಾಭಿಪ್ರಾಯಗಳ ಬಗ್ಗೆಯಾಗಲಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವುಗಳು ಹೇಗೆ ಹುಟ್ಟಿಕೊಳ್ಳುತ್ತವೆಯೋ ಹಾಗೆಯೇ ಶಮನವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಅಲ್ಲದೆ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ರಾಜ್ಯದ ಸಚಿವರು ಭೇಟಿಯಾಗಿರುವುದರಲ್ಲಿ ಯಾವುದೇ ವಿಶೇಷವಿಲ್ಲ. ಶಿಷ್ಟಾಚಾರದಂತೆ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ತಿಳಿಸಿದರು. ಭಿನ್ನಮತದಿಂದ ಸರಕಾರಕ್ಕೆ ಏನೋ ಆಗುತ್ತದೆ. ಬದಲಾವಣೆ ಆಗುತ್ತೆ ಎನ್ನುವ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು ಎಂದರು.
ಇವನ್ನೂ ಓದಿ