ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಕ್ಕಟ್ಟು ಮರೆತು ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರು! (BJP | Yeddyurappa | Congress | By poll | JDS | Ishwarappa)
ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು, ಅಸಮಾಧಾನ ಸೇರಿದಂತೆ ಮುಸುಕಿನ ಗುದ್ದಾಟದಲ್ಲಿಯೇ ಇದ್ದ ಆಡಳಿತಾ ರೂಢ ಬಿಜೆಪಿ ಚನ್ನಪಟ್ಟಣ, ಜಗಳೂರು, ಬಂಗಾರಪೇಟೆ ಉಪ ಚುನಾವಣಾ ಸಿದ್ದತೆಗಾಗಿ ನಗರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಜೆಪಿಯ ಮುಖಂಡರು ಪರಸ್ಪರ ಕೈಕುಲಕಿ ಸಿಹಿ ಹಂಚಿಕೊಂಡು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಿನಿಂದಲೇ ನಾವು ಚುನಾವಣೆ ಎದುರಿಸಿ ಮೂರು ಕ್ಷೇತ್ರಗಳಲ್ಲಿ ಜಯಗಳಿಸಲಿದ್ದೇವೆ ಎಂದರು.
PR

ನಂತರ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು, ಯಡಿಯೂರಪ್ಪನವರು ಉತ್ತಮ ಸಾಧನೆ ಮಾಡಿದ್ದಾರೆ. ಅವರಂತಹ ಉತ್ತಮ ನಾಯಕತ್ವ ನಮಗಿದೆ ಎಂದು ಮುಖ್ಯಮಂತ್ರಿಗಳನ್ನು ಹೊಗಳಿದರು. ಉಪ ಚುನಾವಣೆ ನಡೆಯುವ ಮೂರು ಕ್ಷೇತ್ರದಲ್ಲಿ ಬಿಜೆಪಿ ಅಲೆಯಿದೆ. ಬೇರಾವ ಪಕ್ಷಗಳಿಗೆ ಸಿಗದಂತಹ ಜನಬೆಂಬಲ ದೊರೆತಿದೆ ಎಂದು ತಿಳಿಸಿದರು.

ಅಭಿವೃದ್ಧಿ ಸಂಘಟನೆ ಸರಕಾರದ ಸಾಧನೆ ನಮಗೆ ಶ್ರೀರಕ್ಷೆಯಾಗಿದೆ ಎಂದ ಅನಂತ್ ಕುಮಾರ್, ಉಪ ಚುನಾವಣೆ ಮಿನಿ ಕಪ್ ಅನ್ನು ನಾವು ವಿಶ್ವಕಪ್‌ನಂತೆ ಗೆಲ್ಲಲಿದ್ದೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದ್ದು, ತೃತೀಯ ರಂಗ ಇರೋದಿಲ್ಲಾ ನಾವೇ ಅಧಿಕಾರಕ್ಕೆ ಬರುತ್ತೇವೆ. ಬೂತ್ ಸಮಿತಿ ರಚಿಸಿ ಮತದಾರರನ್ನು ಮೂರು ಬಾರಿ ಸಂಪರ್ಕಿಸಿ ಮತಗಟ್ಟೆಗೆ ಕರೆ ತನ್ನಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಚಿವ ಜಗದೀಶ್ ಶೆಟ್ಟರ್ ಕೂಡ ವೇದಿಕೆಯಲ್ಲಿ ಹಾಜರಿದ್ದು, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಜನರ ಆಶೀರ್ವಾದ ಬಿಜೆಪಿ ಮೇಲಿದ್ದು, ಎಲ್ಲಾ ಚುನಾವಣೆಗಳಲ್ಲೂ ನಮಗೆ ಗೆಲುವು ಎಂದರು.
ಇವನ್ನೂ ಓದಿ