ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಲ್ಪಸಂಖ್ಯಾತರ ಬಗ್ಗೆ ಸಿಎಂಗೆ ಕಾಳಜಿ ಇಲ್ಲ: ರೇವಣ್ಣ (Revanna | JDS | kumaraswamy | Yeddyurappa | BJP)
ವೋಟ್ ಬ್ಯಾಂಕ್ ಇರುವ ಜನಾಂಗದ ಮಠಗಳ ಮೇಲೆ ಮುಖ್ಯಮಂತ್ರಿಗಳ ಕಣ್ಣು ಬೀಳುತ್ತದೆಯೇ ವಿನ, ಸಂಕಷ್ಟದಲ್ಲಿರುವ ಇತರೆ ಅಲ್ಪಸಂಖ್ಯಾತ ಜನಾಂಗದ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ ಜವಳಿ ವರ್ತಕರ ಸಂಘದವರು ಕನ್ನಿಕಾ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವ್ಯಾಪಾರವನ್ನೇ ವೃತ್ತಿಯಾಗಿರಿಸಿಕೊಂಡಿದ್ದರೂ ಆರ್ಥಿಕವಾಗಿ ಹಿಂದುಳಿದಿರುವ ಆರ್ಯವೈಶ್ಯ ಜನಾಂಗದ ಅಭಿವೃದ್ದಿಗೆ ಸರಕಾರ ಯಾವುದೇ ಸಹಕಾರ ನೀಡಲಿಲ್ಲ ಎಂದು ದೂರಿದರು.

ಇಂದು ಗ್ರಾಮೀಣ ಭಾಗದಲ್ಲಿನ ಪ್ರತಿ ಹಳ್ಳಿಗೂ ಹೊರ ರಾಜ್ಯದವರು ಬಜಾರ್‌ಗಳನ್ನು ಸ್ಥಾಪಿಸಿ ಬಟ್ಟೆಗಳನ್ನು ಮನಸಿಗೆ ಬಂದ ಬೆಲೆಗೆ ಮಾರಾಟ ಮಾಡುತ್ತಿರುವ ಕಾರಣಕ್ಕಾಗಿ ಜವಳಿ ಉದ್ಯಮವನ್ನೇ ನಂಬಿ, ತೆರಿಗೆ ಪಾವತಿಸಿ ಹೆಚ್ಚಿನ ಬಂಡವಾಳ ಹೂಡಿರುವ ಜವಳಿ ವರ್ತಕರಿಗೆ ನಷ್ಟ ಉಂಟಾಗುತ್ತಿದೆ ಎಂದು ಶಾಸಕ ರೇವಣ್ಣ ತಿಳಿಸಿದರು.
ಇವನ್ನೂ ಓದಿ