ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಾಯಿ ಬಾಬಾರ 'ಪ್ರೇಮ ಸಾಯಿ' ಅವತಾರ ಮಂಡ್ಯದಲ್ಲೇ? (Sathya Sai Baba | Prema Sai | Mandya | Reincarnation)
WD
ಶಿರಡಿ ಸಾಯಿಬಾಬಾ ಅವರ ಬಳಿಕ ಸತ್ಯ ಸಾಯಿ ಬಾಬಾ, ನಂತರ ಮೂರನೇ ಹಾಗೂ ಕೊನೆಯ ಅವತಾರವಾಗಿ ಪ್ರೇಮ ಸಾಯಿ ಬಾಬಾ ಎಂಬ ನಾಮಧೇಯದಿಂದ ಮಂಡ್ಯದಲ್ಲಿ ಕಾಣಿಸಿಕೊಳ್ಳದಿದ್ದಾರೆಯೇ? ಹೀಗೊಂದು ಮಾತು ಮಂಡ್ಯದ ಜನರಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. 1960ರ ಸುಮಾರಿಗೆ ಮಂಡ್ಯಕ್ಕೆ ಭೇಟಿ ನೀಡಿದ್ದಾಗ ಪುಟ್ಟಪರ್ತಿ ಸಾಯಿ ಬಾಬಾ ಅವರು, ತಮ್ಮ ಮೂರನೇ ಅವತಾರವು ಮಂಡ್ಯದ ಗುಣಪರ್ತಿ ಎಂಬಲ್ಲಿ ಆಗಲಿದೆ ಎಂದು ಹೇಳಿದ್ದರು ಎನ್ನುತ್ತಾರೆ ಸ್ಥಳೀಯರು. ಶ್ರೀರಂಗಪಟ್ಟಣದ ಕಾವೇರಿ ತೀರದ ಹಳ್ಳಿಯೊಂದರಲ್ಲಿ ಅವತಾರವೆತ್ತಲಿರುವುದಾಗಿ ಅವರೇ ಹೇಳಿದ್ದಾರೆ ಎನ್ನುತ್ತಿದ್ದಾರೆ ಸಾಯಿ ಬಾಬಾ ಅವರ ಅತ್ಯಂತ ದೊಡ್ಡ ಭಕ್ತರಾದ ಹಲಗಪ್ಪ ಅವರು.

ಈ ಮಾತಿಗೆ ಪೂರಕವಾಗಿ ಪುಟ್ಟಪರ್ತಿಯ ಸತ್ಯ ಸಾಯಿ ಟ್ರಸ್ಟ್, ಈಗಾಗಲೇ ಪ್ರೇಮ ಸಾಯಿ ಎಂಬ ಭಾವಚಿತ್ರವನ್ನೂ ಬಿಡುಗಡೆ ಮಾಡಿತ್ತು. ಆದರೆ, ಮಂಡ್ಯದ ಕಾವೇರಿ ತೀರದಲ್ಲೆಲ್ಲೂ ಗುಣಪರ್ತಿ ಎಂಬ ಊರು ಇಲ್ಲ. ಆದರೆ, ಸತ್ಯ ಸಾಯಿಬಾಬಾ ಅವರು 1926ರಲ್ಲಿ ಸತ್ಯನಾರಾಯಣ ರಾಜು ಆಗಿ ಜನಿಸಿದ್ದು ಗೊಲ್ಲಪಳ್ಳಿಯಲ್ಲಿ. ಅವರ ಜನ್ಮದ ಬಳಿಕವೇ ಆ ಊರು ಪುಟ್ಟಪರ್ತಿಯಾಗಿ ಹೆಸರು ಗಳಿಸಿಲ್ಲವೇ ಎಂಬುದು ಭಕ್ತರ ವಾದ.

ಹಿಂದೆ, ಸತ್ಯ ಸಾಯಿಬಾಬಾ ಅವರು ಶಿರಡಿ ಸಾಯಿ ಬಾಬಾ ಅವರ ಅವತಾರವೇ ಎಂಬ ವಿಷಯವು ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗ ಮಹಿಳೆಯೊಬ್ಬಾಕೆ ಸಾಕ್ಷ್ಯನೀಡಿ, ತಾನು ಬಾಲಕಿಯಾಗಿದ್ದಾಗ ಶಿರಡಿ ಸಾಯಿ ಬಾಬಾ ಅವರ ಅಂತಿಮ ದಿನಗಳಲ್ಲಿ ಪಡೆದಿದ್ದ ಕೆಲವು ವಸ್ತುಗಳಿದ್ದವು. ಅದರ ಆಧಾರದಲ್ಲಿ ಸತ್ಯ ಸಾಯಿಬಾಬಾ ಅವರು ಶಿರಡಿ ಬಾಬಾರ ಅವತಾರವೇ ಎಂದು ವಾದಿಸಿದ್ದರು. ಕೊನೆಗೆ ಈ ವಿಷಯವು ತಾರ್ಕಿಕ ಅಂತ್ಯ ಕಂಡಿರಲಿಲ್ಲ.

ಹೀಗಾಗಿ, ಮರು ಜನ್ಮದ ಕುರಿತು ವಿವಾದ ಸೃಷ್ಟಿಯಾಗಬಾರದೆಂಬ ಕಾರಣಕ್ಕೆ ಸತ್ಯ ಸಾಯಿ ಬಾಬಾ ಅವರು ತಮ್ಮ ಪ್ರೇಮ ಸಾಯಿ ಭಾವಚಿತ್ರಕ್ಕೆ ಅನುಮೋದನೆ ನೀಡಿದ್ದಾರೆ ಎಂದು ಭಕ್ತರು ಹೇಳುತ್ತಾರೆ.

ಹಲಗಪ್ಪ ಹೇಳುವಂತೆ, ಸಾಯಿ ಬಾಬಾ ಅವರ ಅವತಾರವು ಮಂಡ್ಯ ಜಿಲ್ಲೆಯ ಕಾವೇರಿ ನದಿ ತೀರದಲ್ಲಿ ಪರಿತ್ಯಕ್ತ ಶಿಶುವಾಗಿ ಕಾಣಿಸಿಕೊಳ್ಳಲಿದೆ. ಮೀನುಗಾರನೊಬ್ಬ ಆ ಮಗುವನ್ನು ಬೆಳೆಸುತ್ತಾನಂತೆ, ಆ ಮಗುವಿಗೆ ಪ್ರೇಮ ಸಾಯಿ ಎಂಬ ಹೆಸರಿಡಲಾಗುತ್ತದೆಯಂತೆ.
ಇವನ್ನೂ ಓದಿ