ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ವಾಮಿ ನಿತ್ಯಾನಂದರಿಂದ ಬಾಬಾ ದರ್ಶನಕ್ಕೆ ಮಹಿಳೆಯರ ಅಡ್ಡಿ (Swamy Nityananda | Satya Sai Baba | Darshan | Puttaparti | Last rites)
ವಿವಾದಗಳು ಸ್ವಾಮಿ ನಿತ್ಯಾನಂದರನ್ನು ಇನ್ನೂ ಬಿಟ್ಟಿಲ್ಲ. ಸತ್ಯ ಸಾಯಿ ಬಾಬಾ ಅವರ ಅಂತಿಮ ದರ್ಶನಕ್ಕೆ ಮಂಗಳವಾರ ಹೋದ ಅವರು ಪ್ರಶಾಂತಿ ನಿಲಯಂನಲ್ಲಿ ಬಾಬಾ ಅವರ ಪಾರ್ಥಿವ ಶರೀರ ಇರಿಸಲಾಗಿದ್ದ ಸ್ಥಳಕ್ಕೆ ತಲುಪಬೇಕಿದ್ದರೆ ಬಹಳಷ್ಟು ತ್ರಾಸ ಪಡಬೇಕಾಯಿತು. ಇದಕ್ಕೆ ಕಾರಣ ಕೆಲವು ಮಹಿಳೆಯರ ಆಕ್ಷೇಪ.

ವಿಶ್ವ ಹಿಂದು ಪರಿಷತ್ ಮುಖ್ಯಸ್ಥ ಅಶೋಕ್ ಸಿಂಘಲ್ ಜತೆಗೆ ತನ್ನಿಬ್ಬರು ಶಿಷ್ಯರೊಂದಿಗೆ ಸ್ವಾಮಿ ನಿತ್ಯಾನಂದ ಅವರು ವಿಐಪಿ ಗೇಟ್ ಬಳಿ ಬಂದಾಗ, ಅವರನ್ನು ಸತ್ಯ ಸಾಯಿ ಸೇವಾ ದಳದ ಸ್ವಯಂಸೇವಕರು ತಡೆದರು.

ಈ ಸ್ವಯಂಸೇವಕರಿಗೆ ಮನವರಿಕೆ ಮಾಡಿಸುವಷ್ಟರಲ್ಲಿ ಸ್ವಾಮಿ ನಿತ್ಯಾನಂದರಿಗೆ ಸಾಕು ಸಾಕಾಯಿತು. ಸಿಂಘಲ್ ಅವರು ಒಳಗೆ ಹೋದರೂ ಅವರು ಹಿಂದೆಯೇ ಉಳಿಯಬೇಕಾಯಿತು.

ಸಾಯಿ ಬಾಬಾ ಶರೀರ ಇರಿಸಲಾಗಿದ್ದ ಕುಲವಂತ್ ಹಾಲ್ ಬಳಿಗೆ ಅವರು ಬಂದುದನ್ನು ನೋಡಿದ ಹಲವಾರು ಮಂದಿ ಮಹಿಳೆಯರು, ಸ್ವಾಮಿ ನಿತ್ಯಾನಂದರ ಉಪಸ್ಥಿತಿಗೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಇದು ಒಂದಿಷ್ಟು ಗದ್ದಲಕ್ಕೆ ಕಾರಣವಾಗಿ, ಪೊಲೀಸ್ ಅಧಿಕಾರಿಗಳಿಗೆ ಸುದ್ದಿ ಹೋಯಿತು.

ಕೊನೆಗೆ ಬಾಬಾ ದರ್ಶನಕ್ಕೆ ನಿತ್ಯಾನಂದರಿಗೆ ಅವಕಾಶವನ್ನೇ ನಿರಾಕರಿಸಲಾಯಿತು. ಆಗ ಸೇವಾದಳದ ಹಿರಿಯ ಭಕ್ತರೊಬ್ಬರು ಬಂದು ಮಧ್ಯ ಪ್ರವೇಶಿಸಿ, ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.

ಈಗಾಗಲೇ ಲೈಂಗಿಕ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿರುವ ಸ್ವಾಮಿ ನಿತ್ಯಾನಂದರ ಜಾಮೀನು ಷರತ್ತುಗಳನ್ನು ಸಡಿಲಿಸಲಾಗಿತ್ತು.
ಇವನ್ನೂ ಓದಿ