ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ: ಸಿಎಂ ಸ್ಪಷ್ಟನೆ (Yadyurappa | Deve Gowda | State Politics | JDS | Congress)
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಲಾಗುವುದಿಲ್ಲ ಎಂದು ತಿಳಿಸಿದರು.

ರಾಜ್ಯಾಧ್ಯಕ್ಷರಾಗಿ ಈಶ್ವರಪ್ಪ ಅವಧಿ ಪೂರೈಸಲಿದ್ದಾರೆ. ಅವರ ಸಾರಥ್ಯದಲ್ಲೇ ಪಕ್ಷದ ಬಲವರ್ಧನೆ ಆಗಲಿದೆ. ಮುಂದಿನ ಚುನವಾಣೆಯಲ್ಲಿ 150 ಶಾಸಕರನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಈಶ್ವರಪ್ಪ ಅವರಿಗಿದೆ ಎಂದರು.

ಪರಿಷ್ಠರ ಜತೆ ಚರ್ಚಿಸಿ ಸಂಪುಟ ವಿಸ್ತರಣೆ...
ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸಿಎಂ ವರಿಷ್ಠರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೇ 13ರಂದು ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಬಂದ ಬಳಿಕೆ ಈ ಬಗ್ಗೆ ವರಿಷ್ಠರ ಜತೆ ಚರ್ಚಿಸಲಾಗುವುದು ಎಂದರು.

ಜೆಡಿಎಸ್ ನಿರ್ಮೂಲನೆ ಆಗಬೇಕು...
ಮತ್ತದೇ ತಮ್ಮ ಹಳೆಯ ಹೇಳಿಕೆಯನ್ನು ಪುನರುಚ್ಛಿಸಿರುವ ಸಿಎಂ, ಜೆಡಿಎಸ್ ಬೇರು ಸಹಿತ ನಿರ್ಮೂಲನೆ ಆಗಬೇಕು ಎಂದರು. ಜೆಡಿಎಸ್ ಇರಬಾರದು ಅನ್ನೋದು ನನ್ನ ಆಸೆ. ರಾಷ್ಟ್ರೀಯ ಪಕ್ಷವಾಗಿ ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಇದ್ದರೆ ಸಾಕು. ಹೀಗಾಗಿ ಜೆಡಿಎಸ್ ನಿರ್ಮೂಲನೆ ಆಗಬೇಕೆಂಬುದು ನನ್ನ ವೈಯಕ್ತಿಕ ಆಸೆ ಎಂದರು.

ಜನಬೆಂಬಲವಿಲ್ಲ...
ಮಾಜಿ ಪ್ರಧಾನಿ ದೇವೇಗೌಡರ ಮೇಲೂ ಪ್ರಹಾರ ಮಾಡಿರುವ ಸಿಎಂ, ಸರಕಾರದ ವಿರುದ್ಧ ಜೆಡಿಎಸ್ ಜನಾಂದೋಲನಕ್ಕೆ ನಿರೀಕ್ಷಿತ ಜನ ಬೆಂಬಲ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.

ನಾಳೆ ಶಿವಮೊಗ್ಗದಲ್ಲಿ ಜೆಡಿಎಸ್ ಜನಾಂದೋಲನ ನಡೆಯಲಿದೆ. ಆದರೆ ಕಾರ್ಯಕರ್ತರನ್ನು ಎಲ್ಲಿಂದ ಕರೆತರಲಿದೆ ಎಂಬುದನ್ನು ಕಾದು ನೋಡಬೇಕು ಎಂದವರು ಸವಾಲು ಹಾಕಿದರು.

ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ತಂತ್ರ...
ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದಿರುವ ಸಿಎಂ, ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ಲೇವಡಿ ಮಾಡಿದರು.

ಸರಕಾರದ ವಿರುದ್ಧ ಕಾಂಗ್ರೆಸ್ ನಾಳೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಲಿದೆ. ಆದರೆ ಕಾಂಗ್ರೆಸ್ ಪ್ರತಿಪಕ್ಷವಾಗಿ ಕೆಲಸ ಮಾಡಿ ಮಾನ ಮಾರ್ಯಾದೆ ಉಳಿಸಲಿ ಎಂದು ಸಲಹೆ ಮಾಡಿದರು.
ಇವನ್ನೂ ಓದಿ