ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಿಫಾರಸು ತಿರಸ್ಕಾರ-ಏನೋ ಡೀಲ್ ಆಗಿದೆ: ಎಚ್‌ಡಿಕೆ (BJP | JDS | Deve gowda | Kumaraswamy | Yeddyurappa | Governor)
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾಡಿದ್ದ ಶಿಫಾರಸನ್ನು ಕೇಂದ್ರ ಸರಕಾರ ತಿರಸ್ಕರಿಸಿರುವ ಹಿಂದೆ ಯಾವ ರೀತಿಯ ವ್ಯವಹಾರ ನಡೆದಿದೆ ಎಂಬುದು ನಿರಾಸೆಗೊಂಡಿರುವ ರಾಜ್ಯ ಕಾಂಗ್ರೆಸ್ ನಾಯಕರೇ ಬಹಿರಂಗಪಡಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಕೆಣಕಿದ್ದಾರೆ.

ಮಾಧ್ಯಮವೊಂದರ ಜತೆ ಮಾತನಾಡಿದ ಅವರು, ದೆಹಲಿಯ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಯಾವ ರೀತಿ ತೀರ್ಮಾನವಾಗಿದೆ. ಯಾವ ತರಹ ವ್ಯವಹಾರ ಕುದುರಿದೆ ಎಂಬುದನ್ನು ಕಾಂಗ್ರೆಸಿಗರೇ ಬೆಳಕಿಗೆ ತರುತ್ತಾರೆ ಎಂದರು. ಈ ನಿರ್ಧಾರದ ಹಿಂದೆ ರಾಷ್ಟ್ರೀಯ ನಾಯಕರ ನಡುವೆ ವ್ಯವಹಾರ ನಡೆದಿದೆ ಎಂದು ಪರೋಕ್ಷವಾಗಿ ತಿಳಿಸಿದರು.

ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಕೂಡಲೇ ಸರಕಾರ ವಜಾ ಮಾಡುವಂತೆ ಬೀದಿಗಿಳಿದು ಹೋರಾಟ ಮಾಡಿದವರು ಕಾಂಗ್ರೆಸಿಗರು. ಜೆಡಿಎಸ್ ಕಾದು ನೋಡುವ ನಿರ್ಧಾರಕ್ಕೆ ಬದ್ದವಾಗಿದ್ದು, ಈ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಪಾತ್ರವೇನೂ ಇರಲಿಲ್ಲ. ಕರ್ನಾಟಕ ಹಾಳಾದರೂ ಪರವಾಗಿಲ್ಲ, ಮುಳುಗಿದರೂ ಚಿಂತೆಯಿಲ್ಲ. ನಾವು ಸುರಕ್ಷಿತವಾಗಿರಬೇಕು ಎಂಬುದು ದೆಹಲಿಯಲ್ಲಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಿರ್ಧಾರ.

ರಾಜ್ಯಪಾಲರು ಮಾಡಿದ್ದ ಶಿಫಾರಸನ್ನು ತಿರಸ್ಕರಿಸಿರುವ ಕೇಂದ್ರದ ನಿರ್ಧಾರದ ಬಗ್ಗೆ ತಮ್ಮ ಪಕ್ಷ ತಟಸ್ಥವಾಗಿ ಉಳಿಯಲಿದೆ. ಈ ಸಂಬಂಧ ಜನರೇ ನಿರ್ಧಾರ ಕೈಗೊಳ್ಳಲಿದ್ದಾರೆ. ಅದನ್ನು ಜೆಡಿಎಸ್ ಎದುರು ನೋಡಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇವನ್ನೂ ಓದಿ