ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಆಪರೇಷನ್ ಕಮಲ' ಕಾಂಗ್ರೆಸ್, ಜೆಡಿಎಸ್ ಸೃಷ್ಟಿ: ಸಿಎಂ (Operation kamal | Yediyurappa | Congress | Jds)
PR
ಪ್ರತಿಪಕ್ಷಗಳ ತಂತ್ರಗಳನ್ನು ಭೇಧಿಸಲು 'ಆಪರೇಷನ್ ಕಮಲ' ಅನಿವಾರ್ಯವಾಗಿತ್ತು ಎಂದು ಮೊನ್ನೆಯಷ್ಟೆ ಒಪ್ಪಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮೂರೇ ದಿನಗಳಲ್ಲಿ ಮತ್ತೆ ಉಲ್ಟಾ ಹೊಡೆದಿದ್ದಾರೆ.

ಜನರಿಂದ ಆಯ್ಕೆಯಾದ ಶಾಸಕರನ್ನು ಪಕ್ಷಕ್ಕೆ ಸೆಳೆಯುವ ಜಾಯಮಾನ ನನ್ನದಲ್ಲ. ಅದೇನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಸು ಎಂದು ಮತ್ತೆ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ.

ಬಿಜೆಪಿ ಪಕ್ಷ ಹಿಂದಿನಿದಂಲೂ ಬಲಿಷ್ಠವಾಗಿದೆ, ಶಾಸಕರನ್ನು ಸೆಳೆಯುವ ಅನಿವಾರ್ಯತೆ ನಮಗಿಲ್ಲ.ಪಕ್ಷದ ಸಿದ್ಧಾಂತಗಳಲ್ಲಿ ವಿಶ್ವಾಸವಿಟ್ಟ ಕೆಲ ಶಾಸಕರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಅಪರೇಷನ್ ಕಮಲ ಮಾಧ್ಯಮಗಳ ಸೃಷ್ಟಿಯಾಗಿದೆ ಎಂದರು.

ಅಕ್ರಮ ಗಣಿಗಾರಿಕೆಯನ್ನು ಬಿಜೆಪಿ ಯಾವತ್ತು ಬೆಂಬಲಿಸಿಲ್ಲ. ರಾಜ್ಯದ ಸಂಪತ್ತು ಹಾಳಾಗಬಾರದು ಎನ್ನುವ ಉದ್ದೇಶದಿಂದ ಅದಿರು ರಫ್ತಿಗೆ ನಿಷೇಧ ಹೇರಿದ್ದೇನೆ.ಒಂದು ವೇಳೆ ಅಕ್ರಮ ಗಣಿಗಾರಿಕೆ ಸಾಬೀತಾದಲ್ಲಿ ರೆಡ್ಡಿ ಸಹೋದರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸರಕಾರಕ್ಕೆ ಮೂರು ವರ್ಷಗಳ ತುಂಬಿರುವ ಹಿನ್ನೆಲೆಯಲ್ಲಿ, ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಅಭಿವೃದ್ಧಿಯತ್ತ ಗಮನಹರಿಸುತ್ತೇವೆ. ರೈತರು, ಕೂಲಿಕಾರರು ಏಳಿಗೆಗೆ ಮೀಸಲಾಗಿಡುತ್ತೇವೆ ಎಂದು ಭರವಸೆ ನೀಡಿದರು.

ತಮ್ಮ ಸರಕಾರಕ್ಕೆ ಎರಡು ವರ್ಷಗಳು ತುಂಬಿದಾಗಲೂ ಇದನ್ನೇ ಹೇಳಿದ್ದೀರಲ್ಲ. ಏಕೆ ಗ್ರಾಮಗಳತ್ತ ತೆರಳಲಿಲ್ಲ ಎಂದು ಕೇಳಿದ ಪ್ರಶ್ನೆಗೆ ತಡವರಿಸಿದ ಯಡಿಯೂರಪ್ಪ, ಪ್ರತಿಪಕ್ಷಗಳ ಅಸಹಕಾರದಿಂದಾಗಿ ಹಿನ್ನೆಡೆಯಾಗಿದೆ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ