ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡ್ಡಿ ಆಡಳಿತ ವರ್ಚಸ್ಸಿಗೆ ಧಕ್ಕೆ: ಆಡ್ವಾಣಿ ನಂತ್ರ ರವಿಶಂಕರ್ (Yeddyurappa | Advani | BJP | Karnataka | Ravi shankar prasad | Congress)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರದ ಬಗ್ಗೆ ತನಗೆ ತೃಪ್ತಿ ಇಲ್ಲ ಎಂದು ಎಲ್.ಕೆ.ಆಡ್ವಾಣಿ ಅತೃಪ್ತಿ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ಕೂಡ ಅದೇ ನಿಲುವು ವ್ಯಕ್ತಪಡಿಸಿ, ಸರಕಾರದ ಸಾಧನೆ ಅತ್ಯುತ್ತಮವಾಗಿದ್ದರೂ, ಇಮೇಜ್ ಸುಧಾರಣೆಯಾಗಬೇಕು ಎಂದು ಸಲಹೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸರಕಾರದ ವಿರುದ್ಧದ ಭ್ರಷ್ಟಾಚಾರದ ಆಪಾದನೆಗಳಿಗೆ ಹಾರಿಕೆ ಉತ್ತರ ನೀಡಿದ ಪ್ರಸಾದ್, ಸರಕಾರದ ವರ್ಚಸ್ಸಿಗೆ ಧಕ್ಕೆಯಾಗಿರುವುದನ್ನು ಒಪ್ಪಿಕೊಂಡರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಆಂದೋಲನದಿಂದ ಸರಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಯಡಿಯೂರಪ್ಪ ಅದೆಲ್ಲವನ್ನೂ ಸರಿಪಡಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ರಾಜ್ಯ ಸರಕಾರದ ಸಾಧನೆಯನ್ನು ಕೇಂದ್ರ ಶ್ಲಾಘಿಸಿದೆ. ಇ ಆಡಳಿತ ಅತ್ಯುತ್ತಮ ಎಂದು ಕೇಂದ್ರ ತಂತ್ರಜ್ಞಾನ ಸಚಿವಾಲಯ ಬಣ್ಣಿಸಿದೆ. ಅಭಿವೃದ್ಧಿ ಸೂಚ್ಯಂಕ, ಕೃಷಿ ಕ್ಷೇತ್ರ ಪ್ರಗತಿ, ಆಡಳಿತ ಸುಧಾರಣೆಯಲ್ಲಿ ಯಡಿಯೂರಪ್ಪ ಸರಕಾರ ಉತ್ತಮ ಸಾಧನೆ ಮಾಡಿದೆ ಎಂದರು.

ಯಡಿಯೂರಪ್ಪ ವಿರುದ್ಧದ ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಲೋಕಾಯುಕ್ತರು ಯಾವುದೇ ವರದಿ ನೀಡಿಲ್ಲ. ಹೈಕೋರ್ಟ್‌ನಿಂದ ತೀರ್ಪು ಬಂದಿಲ್ಲ. ನ್ಯಾ.ಪದ್ಮರಾಜ್ ಆಯೋಗ ನೇಮಿಸಲಾಗಿದೆ. ಲೋಕಾಯುಕ್ತರು ವರದಿ ಕೊಟ್ಟಾಗ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇವನ್ನೂ ಓದಿ