ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸರಕಾರಕ್ಕೆ ವಿಪಕ್ಷಗಳು ಬೇಕಾಗಿಲ್ಲ: ಸಿದ್ದರಾಮಯ್ಯ (BJP | Yeddyurappa | Siddaramaiah | Congress | KPCC,)
ರಾಜ್ಯ ಬಿಜೆಪಿ ಸರಕಾರಕ್ಕೆ ವಿಪಕ್ಷಗಳ ಅವಶ್ಯಕತೆ ಇಲ್ಲ. ಹೀಗಾಗಿಯೇ ಮಾತುಕತೆಗೆ ಕರೆದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಸ್ವತಃ ವಿಪಕ್ಷದವರನ್ನು ಕರೆದು ಮಾತನಾಡಬೇಕಿತ್ತು. ಆದರೆ, ನಮ್ಮನ್ನು ಹೊರಗಡೆ ನಿಲ್ಲಿಸುವುದೇ ಅವರ ಉದ್ದೇಶವಾಗಿತ್ತು. ಸದುದ್ದೇಶ ಇದ್ದಿದ್ದರೆ ವಿಪಕ್ಷಗಳ ಜತೆ ಮಾತುಕತೆ ನಡೆಸುತ್ತಿದ್ದರು.

ಧನವಿಧೇಯಕ ಮಸೂದೆ ಮಂಡಿಸಿದ ಮೇಲೆ ಬಜೆಟ್ ಕುರಿತು ಚರ್ಚೆ ಅಂತ್ಯಗೊಳ್ಳುತ್ತದೆ, ಅಧಿವೇಶನ ಅಂತ್ಯಗೊಳ್ಳುತ್ತದೆ. ಕಾಂಗ್ರೆಸ್ ಜೂನ್ 2ರಂದು ಅಧಿವೇಶನ ಬಹಿಷ್ಕರಿಸಿ ಹೊರ ಬಂದ ಮೇಲೆ ಎರಡು ದಿನ ಅಲ್ಲೇ ಇದ್ದರೂ ಸಿಎಂ ಮಾತುಕತೆಗೆ ಕರೆದಿಲ್ಲ. ಅದರಲ್ಲಿ ಆಸಕ್ತಿಯೂ ಇರಲಿಲ್ಲ. ತರಾತುರಿಯಲ್ಲಿ ಧನವಿಧೇಯಕ ಮಸೂದೆ ಮಂಡಿಸುವ ಮೂಲಕ ಬಜೆಟ್ ಚರ್ಚೆಯನ್ನು ಅಂತ್ಯಗೊಳಿಸುವ ಅಗತ್ಯವಿತ್ತೆ. ಇವರಿಗೆ ವಿಪಕ್ಷಗಳು ಬೇಕಾಗಿಯೂ ಇಲ್ಲ ಎಂದು ದೂರಿದರು.
ಇವನ್ನೂ ಓದಿ