ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದಾಳಿ-ಜಾತಿ ನೋಡಿ ಸಿಎಂ ಪರಿಹಾರ ಕೊಟ್ರಾ?: ಎಚ್‌ಡಿಕೆ (Mysore | Kumaraswamy | BJP | Yeddyurappa | Cast politics,)
ಮೈಸೂರಿನ ನಾರಾಯಣಶಾಸ್ತ್ರಿ ನಗರದಲ್ಲಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದ ವ್ಯಕ್ತಿ ರೇಣುಕಾ ಪ್ರಸಾದ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಆತನ ಹೆಸರು (ಲಿಂಗಾಯಿತ ಜಾತಿ) ನೋಡಿ ಪರಿಹಾರ ನೀಡಿದ್ದಾರೆಯೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರು.

ಕಾಡಿನಿಂದ ಆನೆಗಳು ನಾಡಿಗೆ ಲಗ್ಗೆ ಇಟ್ಟ ಪರಿಣಾಮ ಇತ್ತೀಚೆಗೆ ಮೈಸೂರಿನ ಜನರಲ್ಲಿ ಭಯ ಮೂಡಿಸಿತ್ತು. ಈ ಸಂದರ್ಭದಲ್ಲಿ ನರಹಂತಕ ಆನೆಯೊಂದು ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿತ್ತು. ರೇಣುಕಾಪ್ರಸಾದ್ ಕುಟುಂಬಕ್ಕೆ ಐದು ಲಕ್ಷ ರ.ಪರಿಹಾರ ಘೋಷಿಸಿರುವ ಯಡಿಯೂರಪ್ಪ ಮುಂದೆಯೂ ಇಂತಹ ಘಟನೆ ಸಂಭವಿಸಿದಾಗ ಐದು ಲಕ್ಷ ರೂಪಾಯಿ ನೀಡುವರೇ ಎಂದು ಅವರು ಪ್ರಶ್ನಿಸಿದ್ದಾರೆ.

ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಕೊಟ್ಟಿರುವ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಇಷ್ಟೇ ಮೊತ್ತದ ಪರಿಹಾರವನ್ನು ಬೇರೆಯವರಿಗೆ ನೀಡುತ್ತಾರೆಯೇ? ಈ ಹಿಂದೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು. ನಾನು ಸಿಎಂ ಆದ ನಂತರ ಈ ಮೊತ್ತವನ್ನು 1.50ಲಕ್ಷಕ್ಕೆ ಹೆಚ್ಚಿಸಿರುವುದಾಗಿ ಹೇಳಿದರು.

ಮೃತ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿರುವ ವಿಷಯಕ್ಕೂ ಜಾತಿ ರಾಜಕೀಯ ಎಳೆದು ತರುತ್ತಿರುವುದು ಎಷ್ಟು ಸರಿ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಸರು (ಜಾತಿ) ನೋಡಿ ಪರಿಹಾರ ವಿತರಿಸಿದ್ದಾರೆಂಬುದು ವಿತಂಡವಾದ. ಇಂತಹ ವಿಷಯಕ್ಕೂ ಜಾತಿಯನ್ನು ಎಳೆದು ತರುತ್ತಿರುವುದು ಒಂದು ರೋಗವಾಗಿಬಿಟ್ಟಿದೆ. ಹಾಗಾಗಿ ಈ ಬಗ್ಗೆ ಜನರೇ ಹೇಳಬೇಕು, ಯಾರು ಹೆಚ್ಚು ಕ್ರೂರಿ ಎಂದು!ಇಂತಹ ವಿಷಯದಲ್ಲೂ ಸ್ವಾರ್ಥ ಹುಡುಕುವವರಿಗೆ ಏನೆನ್ನಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಏತನ್ಮಧ್ಯೆ ಆನೆ ದಾಳಿಗೆ ಸಿಲುಕಿ ಸಾವಿಗೀಡಾದವರಿಗೆ ಪರಿಹಾರ ನೀಡುವಿಕೆಯಲ್ಲಿ ತಾರತಮ್ಯವೇಕೆ ಎಂದು ನಾಗರಹೊಳೆ ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆ ನಿರ್ದೇಶಕ ಎಂ.ಡಿ.ಪ್ರಭು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರ ಪ್ರಾಣಕ್ಕೂ ಬೆಲೆ ಕಟ್ಟಲಾಗದು. ಆದರೆ, ಆನೆಯಿಂದ ಸಾವಿಗೀಡಾದರೆ ನಗರದವರಿಗೊಂದು, ಕಾಡಿನವರಿಗೊಂದು ಪರಿಹಾರ ನೀಡುವುದು ಸರಿಯಲ್ಲ ಎಂದರು.

ವನ್ಯ ಪ್ರಾಣಿ ದಾಳಿಗೆ ಸಿಲುಗಿ ವ್ಯಕ್ತಿ ಸಾವನ್ನಪ್ಪಿದರೆ ಗರಿಷ್ಠ 3.50ಲಕ್ಷ ಪರಿಹಾರ ನೀಡುವಂತೆ ಸರಕಾರವೇ ಆದೇಶಿಸಿದೆ. ಮೈಸೂರಿನಲ್ಲಿ ಮೊನ್ನೆ ಸಾವನ್ನಪ್ಪಿದ್ದ ರೇಣುಕಾಪ್ರಸಾದ್ ಕುಟುಂಬಕ್ಕೆ ಐದು ಲಕ್ಷ ರೂ.ಪರಿಹಾರ ಕೊಡಲಾಗಿದೆ. ಆದರೆ ಕಾಡಂಚಿನ ಪ್ರದೇಶದವರು, ಆದಿವಾಸಿಗಳು ನೂರಾರು ಮಂದಿ ಸಾವನ್ನಪ್ಪಿದ್ದಾರೆ ಅವರಿಗೂ ಅಷ್ಟೇ ಪ್ರಮಾಣದ ಪರಿಹಾರ ನೀಡುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಇವನ್ನೂ ಓದಿ