ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿ.ಕೆ.ಹರಿಪ್ರಸಾದ್ v/s ಲೋಕಾಯುಕ್ತ: ಸವಾಲು ಸ್ವೀಕಾರ (BK Hariprasad | Santhosh hegde | Lokayuktha | Congress | BJP | Yeddyurappa)
ಬಿಜೆಪಿ ಹೈಕಮಾಂಡ್‌ನಂತೆ ವರ್ತಿಸುತ್ತಿದ್ದಾರೆ ಎಂಬ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಆರೋಪಕ್ಕೆ ತಿರುಗೇಟು ನೀಡಿರುವ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ, ಹರಿಪ್ರಸಾದ್ ಮೊದ್ಲು ಅವರ ಪೂರ್ವಾಶ್ರಮ ನೆನಪು ಮಾಡಿಕೊಳ್ಳಲಿ. ಅಷ್ಟೇ ಅಲ್ಲ ಅವರ ಜತೆ ಮುಖಾಮುಖಿ ಚರ್ಚೆಗೆ ಸಿದ್ದ ಎಂದು ಹೇಳುವ ಮೂಲಕ ಸವಾಲನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.

ಲೋಕಾಯುಕ್ತ ಸಂತೋಷ್ ಹೆಗ್ಡೆ ಬಿಜೆಪಿ ಹೈಕಮಾಂಡ್‌ನಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಹೆಗ್ಡೆ ಬಿಜೆಪಿಗೆ ರಕ್ಷಕರಾಗಿದ್ದಾರೆ. ಆ ನಿಟ್ಟಿನಲ್ಲಿ ಅವರು ಲೋಕಾಯುಕ್ತರಾಗಿ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಬಿಕೆ ಗಂಭೀರವಾಗಿ ಆರೋಪಿಸಿದ್ದರು.

ಅಷ್ಟೇ ಅಲ್ಲ ಲೋಕಾಯುಕ್ತರೇನು ಸತ್ಯಹರಿಶ್ಚಂದ್ರರಲ್ಲ, ಬೇಕಿದ್ದರೆ ಅವರ ಜತೆ ಮುಖಾಮುಖಿ ಚರ್ಚೆಗೂ ಸಿದ್ಧ ಎಂದು ಸವಾಲು ಹಾಕಿದ್ದರು. ಆ ನಿಟ್ಟಿನಲ್ಲಿ ಬಿ.ಕೆ.ಹರಿಪ್ರಸಾದ್ ಸವಾಲನ್ನು ಸ್ವೀಕರಿಸಿರುವುದಾಗಿ ಹೇಳಿರುವ ಹೆಗ್ಡೆಯವರು, ತಾನು ಮುಖಾಮುಖಿ ಮಾತುಕತೆ ಬರುವುದಾಗಿ ತಿರುಗೇಟು ನೀಡಿದ್ದಾರೆ.

ನಾನು ನನ್ನ ವ್ಯಾಪ್ತಿಯಲ್ಲಿ ಕೈಗೊಂಡಿದ್ದೇನೆ. ಏನು ಮಾಡಬೇಕು, ಮಾಡಬಾರದು ಎಂಬುದನ್ನು ಬೇರೆಯವರಿಂದ ಕಲಿಯಬೇಕಾದ ಅವಶ್ಯಕತೆ ಇಲ್ಲ. ಹರಿಪ್ರಸಾದ್ ಮೊದಲು ತಮ್ಮ ಪೂರ್ವಾಶ್ರಮ ನೆನಪಿನಲ್ಲಿಟ್ಟುಕೊಂಡು ಮಾತನಾಡಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇವನ್ನೂ ಓದಿ