ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನ್ನದು ಭ್ರಷ್ಟಚಾರ ರಹಿತ ಸರ್ಕಾರ ಆಗಿರಲಿಲ್ಲ: ಎಚ್‌ಡಿಕೆ (Kumaraswamy | JDS | Lokayuktha | Santhosh Hegde | Yeddyurappa | BJP)
WD
'ನನ್ನ ಅಧಿಕಾರಾವಧಿಯಲ್ಲಿ ಸರ್ಕಾರ ಬಿಜೆಪಿಯಷ್ಟು ಭ್ರಷ್ಟವಾಗಿರಲಿಲ್ಲ. ಆದರೆ ನನ್ನ ಸರ್ಕಾರ ಪಾರದರ್ಶಕವಾಗಿ ಭ್ರಷ್ಟಾಚಾರ ರಹಿತ ಸರ್ಕಾರ ಆಗಿತ್ತು' ಎಂಬುದನ್ನು ನಾನು ಹೇಳುವುದಿಲ್ಲ. ಆ ನಿಟ್ಟಿನಲ್ಲಿ ಕುಮಾರಸ್ವಾಮಿ ಸರ್ಕಾರಕ್ಕಿಂತ ಯಡಿಯೂರಪ್ಪ ಸರ್ಕಾರ ಹೆಚ್ಚು ಭ್ರಷ್ಟ ಎಂಬ ಲೋಕಾಯುಕ್ತರ ಹೇಳಿಕೆ ಸರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರಕ್ಕಿಂತ ಬಿಜೆಪಿ ಸರ್ಕಾರ ಹೆಚ್ಚು ಭ್ರಷ್ಟ. ಅದೇ ರೀತಿಯಲ್ಲಿ ಹಿಂದಿನ ಸರ್ಕಾರಕ್ಕಿಂತ ಕುಮಾರಸ್ವಾಮಿ ಸರ್ಕಾರ ಕೂಡ ಭ್ರಷ್ಟವಾಗಿತ್ತು ಎಂಬ ಲೋಕಾಯುಕ್ತರ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ. ಆ ಬಗ್ಗೆ ನಾನೇನೂ ಅಸಮಾಧಾನ ಹೊಂದಿಲ್ಲ ಎಂದು ಹೇಳಿದರು.

ಹಾಗಂತ ನನ್ನ ಸರ್ಕಾರದ ಅವಧಿಯಲ್ಲಿ ಸಚಿವರು ತೆಗೆದುಕೊಂಡ ನಿರ್ಧಾರಕ್ಕೆ ನಾನು ಹೊಣೆಗಾರನಲ್ಲ. ನನ್ನ ಸರ್ಕಾರದಲ್ಲಿ 18 ಜನ ಸಚಿವರು ಕಾರ್ಯ ನಿರ್ವಹಿಸಿದ್ದಾರೆ. ಅವರ ಯಾರ ಮೇಲೂ ಯಾವುದೇ ಆಪಾದನೆ ಇಲ್ಲ. ಅವರಾರು ಕೂಡ ಕೋರ್ಟ್‌ ಕಟಕಟೆ ಏರಿ ಜಾಮೀನು ಪಡೆದಿಲ್ಲ ಎಂದು ವ್ಯಂಗ್ಯವಾಡಿದರು.

ಆದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅಕ್ರಮ ಗಣಿಗಾರಿಕೆ ವರದಿ ಕುರಿತಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ವಿರುದ್ಧ ವಾಗ್ದಾಳಿ ನಡೆಸುವ ಮೊದಲು ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ವಿಮರ್ಶೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಭ್ರಷ್ಟಾಚಾರದ ರಕ್ಷಣೆ ಮಾಡಿದ್ದು ಲೋಕಾಯುಕ್ತರೋ ಅಥವಾ ಕಾಂಗ್ರೆಸ್ಸಿಗರೋ ಎಂಬುದನ್ನು ಹರಿಪ್ರಸಾದ್ ಉತ್ತರ ಹೇಳಬೇಕು. ರಾಜ್ಯ ಸರ್ಕಾರದ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿದ್ದು ಯಾಕೆ? ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದ ಹಲವು ಮುಖಂಡರುಗಳೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಇವನ್ನೂ ಓದಿ