ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೋಯೆಲ್ ಗಣಿ ಕರ್ಮಕಾಂಡದಲ್ಲಿ ಕುಮಾರ ಭಾಗಿ (Kumarswamy | Illigal mining | Vinod goel | Lokayukta)
PR
ಜಂತಕಲ್ ಎಂಟರ್‌ಪ್ರೈಸೆಸ್‌ನ ವಿನೋದ್ ಗೋಯೆಲ್ ಎಸಗಿದ ಅಕ್ರಮಗಳಿಗೆ ಕಣ್ಣುಮುಚ್ಚಿ ಸಹಿಹಾಕಿರುವ ಅಂದಿನ ಮುಖ್ಯಮಂತ್ರಿ ಜಿಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಲೋಕಾಯುಕ್ತರ ಅಂತಿಮ ವರದಿಯಲ್ಲಿ, ಚಿತ್ರದುರ್ಗ ಜಿಲ್ಲೆಯ ಜಂತಕಲ ಎಂಟರ್‌ಪ್ರೈಸೆಸ್ ಹಾಗೂ ಸಾಯಿ ವೆಂಕಟೇಶ್ವರ್ ಮಿನರಲ್ಸ್‌ನ ಅದಿರು ಸಾಗಾಣೆ ಹಾಗೂ ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಕೇಂದ್ರ ಪರಿಸರ ಮತ್ತು ಅರಣ್ಯಸಚಿವಾಲಯ ಅನುಮತಿ ಪತ್ರ ನೀಡಿದ್ದರಿಂದ ತಾವು ಕೊಡಬೇಕಾಯಿತು. ಅದರಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಕುಮಾರ ಅಲವತ್ತುಕೊಂಡಿದ್ದಾರೆ.

ಲೋಕಾಯುಕ್ತರು ಕಲೆ ಹಾಕಿರುವ ಮಾಹಿತಿಗಳ ಪ್ರಕಾರ ಕುಮಾರಸ್ವಾಮಿಯವರು ಕಾನೂನುಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ನೀಡಿರುವುದು ಕಂಡುಬಂದಿದೆ ಎಂದು ಅಧಿಕಾರಿ ಮೂಲಗಳು ಬಹಿರಂಗಪಡಿಸಿವೆ.

ಕುಮಾರಸ್ವಾಮಿ ತಪ್ಪು ಮಾಡಿರುವ ಜತೆಗೆ ಅಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಗಂಗಾರಾಮ್ ಬಡೇರಿಯಾ ಕೂಡಾ ಈ ಪ್ರಮಾದದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಸರಕಾರಕ್ಕೆ ಪತ್ರ ಬರೆದಿರುವ ರಹಸ್ಯ ಕೂಡಾ ಬಹಿರಂಗವಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆ, ಲೋಕಾಯುಕ್ತ