ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಏನಾಗಲಿದೆ? ರಾಜ್ಯಾದ್ಯಂತ ಗಣಿ ವರದಿ ಕುತೂಹಲ, ಬೆಟ್ಟಿಂಗ್ (BJP | Yeddyurappa | Lokayukta | Santhosh hegde | Illegal Mining Report | Mysore)
WD
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಅಂತಿಮ ವರದಿ ಸರ್ಕಾರಕಕ್ಕೆ ಮಧ್ಯಾಹ್ನ 3ಗಂಟೆಗೆ ಲೋಕಾಯುಕ್ತರು ಅಧಿಕೃತವಾಗಿ ಸಲ್ಲಿಸಲಿದ್ದಾರೆ. ಏತನ್ಮಧ್ಯೆ ಗಣಿ ವರದಿ ಸ್ಫೋಟದ ಕುರಿತು ರಾಜ್ಯದ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಹಲವಡೆ ಜನರು ಟಿವಿ ಮುಂದೆ ಕುಳಿತಿದ್ದಾರೆ. ಮತ್ತೊಂದೆ ಯಡಿಯೂರಪ್ಪ ಮುಖ್ಯಮಂತ್ರಿಗಾದಿಯಲ್ಲಿ ಉಳಿಯುತ್ತಾರಾ ಅಥವಾ ಕೆಳಗಿಳಿಯುತ್ತಾರಾ ಎಂಬ ಬಗ್ಗೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಕ್ರಮ ಗಣಿಗಾರಿಕೆ ವರದಿ ಸಲ್ಲಿಕೆಗೆ ಲೋಕಾಯುಕ್ತರು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಇಂದು ಮಧ್ಯಾಹ್ನ 2-30ರಿಂದ 3-30ರೊಳಗೆ ವರದಿ ಸಲ್ಲಿಸಲಿದ್ದಾರೆ. ಆದರೆ ಗಣಿ ವರದಿ ಬಗ್ಗೆ ಜನಸಾಮಾನ್ಯರಲ್ಲಿಯೂ ಸಾಕಷ್ಟು ಬೆರಗು ಮೂಡಿಸಿದೆ.

ಏತನ್ಮಧ್ಯೆ ಯಡಿಯೂರಪ್ಪ ಸಿಎಂ ಗಾದಿಯಲ್ಲಿ ಉಳೀತಾರಾ ಅಥವಾ ಕೆಳಗಿಳಿಯುತ್ತಾರಾ ಎಂಬ ಬಗ್ಗೆ ಮೈಸೂರಿನಲ್ಲಿ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ.

ಅಕ್ರಮ ಗಣಿಗಾರಿಕೆ ವರದಿಯಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿರುವ ಯಡಿಯೂರಪ್ಪ ತಲೆದಂಡವಾಗುತ್ತಾ ಅಥವಾ ಇಲ್ಲವಾ ಎಂಬ ಬಗ್ಗೆ ಜನಸಾಮಾನ್ಯರಿಂದ ಹಿಡಿದು ದೊಡ್ಡ ಕುಳಗಳು ಜಮೀನು, ಮನೆ, ನಗದು ಮೂಲಕ ಬೆಟ್ಟಿಂಗ್ ಕಟ್ಟಿರುವ ಅಂಶ ತಿಳಿದು ಬಂದಿದೆ.

ಅದೇ ರೀತಿ ಗಣಿನಾಡು ಬಳ್ಳಾರಿಯಲ್ಲಿ ಗಣಿ ವರದಿಯಲ್ಲಿ ಏನಿದೆ ಎಂದು ತಿಳಿಯುವ ನಿಟ್ಟಿನಲ್ಲಿ ಲಾರಿ ಚಾಲಕರು,ಮಾಲೀಕರು ಟಿವಿ ಮುಂದೆ ಜಮಾಯಿಸಿದ್ದಾರೆ. ಬೆಂಗಳೂರಿನಲ್ಲಿಯೂ ಲೋಕಾಯುಕ್ತರ ಕಚೇರಿ ಮುಂದೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಜನರು ನೆರೆದಿದ್ದಾರೆ. ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಅಕ್ರಮ ಗಣಿ ವರದಿ ಕ್ರಿಕೆಟ್‌ಕ್ಕಿಂತಲೂ ದೊಡ್ಡ ಕ್ರೇಜ್ ಹುಟ್ಟಿಸಿದೆ.
ಇವನ್ನೂ ಓದಿ