ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡ್ಡಿ ಕೋಪ: ಸಚಿವಗೆ ತಪರಾಕಿ-ನಾಯ್ಡು ಲ್ಯಾಪ್‌ಟಾಪ್ ಪುಡಿ! (Yeddyurappa | M Venkaiah Naidu | laptop | slaps minister | Illegal mining Report)
PR
ಅಕ್ರಮ ಗಣಿ ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ನೀಡಬೇಕೆಂದು ಹೈಕಮಾಂಡ್ ಬಿ.ಎಸ್.ಯಡಿಯೂರಪ್ಪಗೆ ಗಡುವು ವಿಧಿಸಿದ್ದು ಅವರನ್ನು ಕೆಂಡಮಂಡಲರನ್ನಾಗಿಸಿತ್ತೇ? ದೂರ್ವಾಸ ಮುನಿ ಎಂದೇ ಬಿಂಬಿಸಲ್ಪಟ್ಟಿದ್ದ ಯಡಿಯೂರಪ್ಪನವರು ರಾಜೀನಾಮೆಯ ಒತ್ತಡದಿಂದ ಆಕ್ರೋಶಕ್ಕೊಳಗಾಗಿ ತಮ್ಮ ಆಪ್ತ ಸಚಿವರೊಬ್ಬರಿಗೆ ತಪರಾಕಿ ನೀಡಿದ್ದಲ್ಲದೇ, ರಾಜ್ಯಸಭಾ ಸದಸ್ಯರೊಬ್ಬರ ಲ್ಯಾಪ್‌ಟಾಪ್ ಅನ್ನು ಪುಡಿಪುಡಿ ಮಾಡಿದ್ದಾರೆನ್ನುವ ಗುಸು,ಗುಸು ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡತೊಡಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭಾನುವಾರ ನಡೆದ ಬಲಿಜ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಯಡಿಯೂರಪ್ಪ ರೇಸ್‌ಕೋರ್ಸ್ ರಸ್ತೆಯ ನಿವಾಸಕ್ಕೆ ಬಂದು ಊಟ ಮಾಡಿ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮಧ್ಯಾಹ್ನ 2.30ರೊಳಗೆ ರಾಜೀನಾಮೆ ನೀಡಬೇಕೆಂದು ಹೈಕಮಾಂಡ್ ವಿಧಿಸಿದ್ದ ಗಡುವು ಮೀರುತ್ತಿರುವುದನ್ನು ಕಂಡು ಆತಂಕಗೊಂಡ ಆಪ್ತ ಸಚಿವರೊಬ್ಬರು, ಯಡಿಯೂರಪ್ಪ ಅವರನ್ನು ಎಬ್ಬಿಸಲು ಹೋದರು.

ಗಡುವಿನೊಳಗೆ ರಾಜೀನಾಮೆ ನೀಡದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ವರಿಷ್ಠರು ಎಚ್ಚರಿಸಿದ್ದರು. ಆದರೆ, ಇದಕ್ಕೂ ಮುನ್ನ ಇದೇ ಸಚಿವರು ರಾಜೀನಾಮೆ ವಿಳಂಬ ಮಾಡುವಂತೆ ಸಲಹೆ ನೀಡಿದ್ದರು. ವರಿಷ್ಠರ ಅವಕೃಪೆಗೆ ಪಾತ್ರರಾದ ಸಿಟ್ಟಿನಲ್ಲಿದ್ದ ಯಡಿಯೂರಪ್ಪ ಈ ಸಚಿವರನ್ನು ಕಂಡು ರೌದ್ರಾವತಾರ ತಾಳಿ ತಪರಾಕಿ ಬಾರಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ವೆಂಕಯ್ಯ ನಾಯ್ಡು ಲ್ಯಾಪ್‌ಟಾಪ್ ಪುಡಿಪುಡಿ:
ರಾಜೀನಾಮೆ ನಂತರ ವರಿಷ್ಠರು ತಮ್ಮ ಯಾವುದೇ ಷರತ್ತು ಈಡೇರಿಸದಿರುವುದನ್ನು ಕಂಡು ರೇಗಿ ಹೋದ ಯಡಿಯೂರಪ್ಪ ಖುದ್ದು ವರಿಷ್ಠರನ್ನು ಭೇಟಿ ಮಾಡಿ ಒತ್ತಡ ಹಾಕಲು ಅಶೋಕ ಹೋಟೆಲ್‌ಗೆ ಭಾನುವಾರ ಸಂಜೆ ತೆರಳಿದರು. ಮೊದಲೇ ಅಧಿಕಾರ ಕಳೆದುಕೊಂಡ ಕೋಪದಲ್ಲಿದ್ದ ಯಡಿಯೂರಪ್ಪ ವರಿಷ್ಠರ ವಿಳಂಬ ಧೋರಣೆ ರೇಗುವಂತೆ ಮಾಡಿತ್ತು. ಹೋಟೆಲ್‌ನಲ್ಲಿ ರಾಜ್ಯಸಭೆ ಸದಸ್ಯರೊಬ್ಬರನ್ನು ನೋಡುತ್ತಲೇ ಕಿಡಿಕಿಡಿಯಾದ ಅವರು, ನನ್ನಿಂದ ಲಾಭ ಪಡೆದವರು ನನ್ನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಆ ಕೊಠಡಿಯಲ್ಲಿದ್ದ ರಾಜ್ಯಸಭಾ ಸದಸ್ಯರ (ವೆಂಕಯ್ಯನಾಯ್ಡು)ಲ್ಯಾಪ್‌ಟಾಪ್ ಯಡಿಯೂರಪ್ಪನವರ ಕೋಪಕ್ಕೆ ತುತ್ತಾಗಿ ಪುಡಿಪುಡಿಯಾಗಿತ್ತು ಎನ್ನಲಾಗಿದೆ. ಆದರೆ ಯಡಿಯೂರಪ್ಪನವರಿಗೆ ರಾಜೀನಾಮೆ ವಿಳಂಬ ಮಾಡಿ ಎಂದು ಬಿಟ್ಟಿ ಸಲಹೆ ನೀಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿ ತಪರಾಕಿ ತಿಂದ ಸಚಿವರು ಯಾರು ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಜೆಪಿ, ಯಡಿಯೂರಪ್ಪ, ವೆಂಕಯ್ಯ ನಾಯ್ಡು, ಅಕ್ರಮ ಗಣಿ ವರದಿ, ಲೋಕಾಯುಕ್ತ, ತಪರಾಕಿ, ಲ್ಯಾಪ್ಟಾಪ್