ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ಲೀಸ್...ಚಾಪ್ಟರ್ 22 ಮರುಪರಿಶೀಲಿಸಿ: ಲೋಕಾಯುಕ್ತರಿಗೆ ಸಿಎಂ (Lokayukta | Illegal Mining Report | Hegde | High court | Puttaswamy | Yeddyurappa)
ಅಕ್ರಮ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ಅಂತಿಮ ವರದಿಯಲ್ಲಿನ ಅಧ್ಯಾಯ 22ರಲ್ಲಿನ ಪ್ರಸ್ತಾಪವನ್ನು ಮರುಪರಿಶೀಲಿಸಬೇಕೆಂದು ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲೋಕಾಯುಕ್ತರು ನೀಡಿರುವ ಅಕ್ರಮ ಗಣಿ ವರದಿಯನ್ನು ರದ್ದುಪಡಿಸುವಂತೆ ಯಡಿಯೂರಪ್ಪ ಈಗಾಗಲೇ ಹೈಕೋರ್ಟ್ ಮೊರೆ ಹೋಗಿದ್ದಾರೆ. ಏತನ್ಮಧ್ಯೆ ವರದಿಯ 22ನೇ ಅಧ್ಯಾಯದ ಶಿಫಾರಸ್ಸನ್ನು ಮರುಪರಿಶೀಲಿಸುವಂತೆ ಲೋಕಾಯುಕ್ತರಿಗೆ ಮನವಿ ನೀಡಿರುವುದಾಗಿ ಬಿಜೆಪಿ ಮುಖಂಡ, ಸಿಎಂ ಆಪ್ತ ಬಿ.ಜೆ.ಪುಟ್ಟಸ್ವಾಮಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅಧ್ಯಾಯ 22ರಲ್ಲಿ ಸೌತ್ ವೆಸ್ಟ್ ಮೈನಿಂಗ್ ಕಂಪನಿಗೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈ ಕಂಪನಿಯಿಂದ ಪ್ರೇರಣಾ ಟ್ರಸ್ಟ್‌ಗೆ ಸುಮಾರು 20ಕೋಟಿ ರೂಪಾಯಿಯಷ್ಟು ದೇಣಿಗೆ ಬಂದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಇದು ಸೌತ್ ವೆಸ್ಟ್ ಕಂಪನಿಗೆ ಗಣಿ ಅನುಮತಿ ನೀಡುವ ಬಗ್ಗೆಯೇ ಇಷ್ಟೊಂದು ಮೊತ್ತದಲ್ಲಿ ಟ್ರಸ್ಟ್‌ಗೆ ದೇಣಿಗೆ ನೀಡಿರಬಹುದು ಎಂದು ತಿಳಿಸಿದ್ದಾರೆ. ಆದರೆ ಇದರಲ್ಲಿ ಯಾವುದೇ ದಾಖಲೆಯಾಗಲಿ ಅಥವಾ ಖಚಿತ ಅಂಶ ಇಲ್ಲ.

ಯಡಿಯೂರಪ್ಪನವರು ಸೌತ್ ವೆಸ್ಟ್ ಕಂಪನಿಗೆ ಯಾವುದೇ ಗಣಿಗಾರಿಕೆಗೆ ಅನುಮತಿಯೂ ನೀಡಿಲ್ಲ. ಅಲ್ಲದೇ ಯಡಿಯೂರಪ್ಪ ಪ್ರತ್ಯಕ್ಷವಾಗಿ ಆಗಲಿ ಪರೋಕ್ಷವಾಗಿಯೇ ಆಗಲಿ ಪ್ರೇರಣಾ ಟ್ರಸ್ಟ್ ಜತೆ ಯಾವುದೇ ಸಂಬಂಧ ಹೊಂದಿಲ್ಲ. ಆದಾಗ್ಯೂ ಲೋಕಾಯುಕ್ತರು ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಶಿಫಾರಸು ಮಾಡಿರುವುದೇ ರಾಜ್ಯರಾಜಕಾರಣದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿರುವುದಾಗಿ ಪುಟ್ಟಸ್ವಾಮಿ ಹೇಳಿದರು.

ಆ ನಿಟ್ಟಿನಲ್ಲಿ ಲೋಕಾಯುಕ್ತರು ಅಧ್ಯಾಯ 22ರಲ್ಲಿನ ಶಿಫಾರಸ್ಸಿನ ಬಗ್ಗೆ ಮರುಪರಿಶೀಲಿಸುವಂತೆ ಯಡಿಯೂರಪ್ಪನವರು ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು. ಹಲವಾರು ವಿಚಾರದಲ್ಲಿ ಲೋಕಾಯುಕ್ತರು ನೋಟಿಸ್ ನೀಡದೆ ತೀರ್ಪು ಕೊಟ್ಟಿದ್ದಾರೆ. ಕುಮಾರಸ್ವಾಮಿ ಕಾಲದಲ್ಲಿನ ಅಕ್ರಮ ಗಣಿಗಾರಿಕೆ, ಅದಿರು ರಫ್ತಿನ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಅವರು ಮಾಜಿಯಾಗಿರುವುದರಿಂದ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದ್ಯಾವ ನ್ಯಾಯ? ಇವೆಲ್ಲ ಲೋಕಾಯುಕ್ತರ ವರದಿಯ ಮೇಲೆ ಸಂಶಯ ಮೂಡಿಸಲು ಕಾರಣವಾಗಿದೆ ಎಂದರು.

ಲೋಕಾಯುಕ್ತರು ಹೇಳಿದ ಅಂಶದಲ್ಲಿ ಸತ್ಯಾಂಶ ಇಲ್ಲ ಎಂಬುದನ್ನು ಜನರ ಮುಂದಿಡಬೇಕೆಂಬ ನಿಟ್ಟಿನಲ್ಲಿ ಯಡಿಯೂರಪ್ಪನವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಲೋಕಾಯುಕ್ತರ ವರದಿಯಿಂದಾಗಿ ಕಳೆದ ನಲ್ವತ್ತು ವರ್ಷಗಳಿಂದ ರಾಜಕಾರಣ ಮಾಡುತ್ತ ಬಂದಿದ್ದ ಯಡಿಯೂರಪ್ಪನವರ ವರ್ಚಸ್ಸಿಗೆ ಧಕ್ಕೆ ಬಂದಿದೆ. ಲೋಕಾಯುಕ್ತರು ತರಾತುರಿಯಲ್ಲಿ ವರದಿ ಕೊಟ್ಟು ರಾಜ್ಯದ ಜನತೆಗೆ ಆಘಾತ ಉಂಟು ಮಾಡಿರುವುದಾಗಿ ದೂರಿದರು.

ನಾನು ನಿವೃತ್ತಿಯಾಗಿದ್ದೇನೆ-ಹೆಗ್ಡ
ನಾನು ಮಂಗಳವಾರ ಲೋಕಾಯುಕ್ತ ಹುದ್ದೆಯಿಂದ ನಿವೃತ್ತಿಯಾಗಿದ್ದೇನೆ. ಹಾಗಾಗಿ ಮುಂದಿನ ನೂತನ ಲೋಕಾಯುಕ್ತರು ಯಡಿಯೂರಪ್ಪನವರ ಮನವಿಯನ್ನು ಪರಿಶೀಲಿಸುವಂತೆ ಶಿಫಾರಸು ಮಾಡುವುದಾಗಿ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿರುವುದಾಗಿ ಬಿ.ಜೆ.ಪುಟ್ಟಸ್ವಾಮಿ ಈ ಸಂದರ್ಭದಲ್ಲಿ ತಿಳಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಾಯುಕ್ತ, ಅಕ್ರಮ ಗಣಿ ವರದಿ, ಸಂತೋಷ್ ಹೆಗ್ಡೆ, ಹೈಕೋರ್ಟ್, ಬಿಜೆ ಪುಟ್ಟಸ್ವಾಮಿ, ಯಡಿಯೂರಪ್ಪ