ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅನುಗ್ರಹದಲ್ಲಿ ನೂತನ ಸಿಎಂ 'ಸದಾನಂದ' ವಾಸ್ತವ್ಯ (BJP | Sadananda | Anugraha | New CM | Yeddyurappa | Eshwarappa)
PR
ನೂತನ ಮುಖ್ಯಮಂತ್ರಿ ದೇವರಗುಂಡ ವೆಂಕಪ್ಪಗೌಡ ಸದಾನಂದ ಗೌಡ ಮತ್ತು ಕುಟುಂಬ ಸದಸ್ಯರು ಗುರುವಾರದಿಂದ ಅನುಗ್ರಹದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂದು ಸದಾನಂದ ಗೌಡರು ಮತ್ತು ಕುಟುಂಬ ಸಮೇತರಾಗಿ ಅನುಗ್ರಹ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಾಮಾನ್ಯವಾಗಿ ಮುಖ್ಯಮಂತ್ರಿಯಾದವರು ಅನುಗ್ರಹದಲ್ಲಿ ವಾಸ್ತವ್ಯ ಹೂಡುವುದು ವಾಡಿಕೆ. ಆದರೆ ಯಡಿಯೂರಪ್ಪ ಮಾತ್ರ ರೇಸ್‌ಕೋರ್ಸ್ ರಸ್ತೆಯ ನಿವಾಸವೇ ಅದೃಷ್ಟದ ಮನೆ ಎಂದು ಅಲ್ಲಿಯೇ ಉಳಿದಿದ್ದರು. ಹಾಗಾಗಿ ಅನುಗ್ರಹ ಖಾಲಿಯಾಗಿಯೇ ಇತ್ತು.

ಆ ನಿಟ್ಟಿನಲ್ಲಿ ಬುಧವಾರ ನೂತನ ಸಿಎಂ ಆಗಿ ಆಯ್ಕೆಯಾಗಿದ್ದ ಸದಾನಂದ ಗೌಡರು ತಮ್ಮ ವಾಸ್ತವ್ಯಕ್ಕೆ ಅನುಗ್ರಹವನ್ನೇ ಆಯ್ಕೆ ಮಾಡಿಕೊಂಡು ಇಂದು ತಮ್ಮ ಪತ್ನಿ ಡಾಟಿ, ಪುತ್ರ ಕಾರ್ತಿಕ್ ಜತೆ ಗೃಹ ಪ್ರವೇಶ ಮಾಡಿ, ಅನುಗ್ರಹದಲ್ಲಿ ಪೂಜೆ ನೆರವೇರಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅನುಗ್ರಹವನ್ನೇ ತಮ್ಮ ನಿವಾಸವನ್ನಾಗಿ ಮಾಡಿಕೊಂಡಿದ್ದರು. ಆದರೆ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮಾತ್ರ ಕಾವೇರಿಯನ್ನು ತಮ್ಮ ಅಧಿಕೃತ ನಿವಾಸ ಮಾಡಿಕೊಂಡಿದ್ದರು. ಅನುಗ್ರಹದ ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಎಸ್.ಎಂ.ಕೃಷ್ಣ ಹಾಗೂ ಕುಮಾರಸ್ವಾಮಿ ಅನುಗ್ರಹದ ವಾಸ್ತುವನ್ನು ಬದಲಾಯಿಸಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಜೆಪಿ, ಸದಾನಂದ ಗೌಡ, ಅನುಗ್ರಹ, ನೂತನ ಮುಖ್ಯಮಂತ್ರಿ, ಯಡಿಯೂರಪ್ಪ, ಈಶ್ವರಪ್ಪ