ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಬಿಜೆಪಿ ಸರಕಾರ ಉರುಳಿಸುವ ಉದ್ದೇಶವಿಲ್ಲ: ರಾಮುಲು (Sreeramulu | BJP | Government | Resign | Latest Political News in Karnataka | Bangalore News | Karnataka Politics)
PR
ರಾಜ್ಯದ ಆರು ಕೋಟಿ ಜನತೆ ಬಿಜೆಪಿ ಪಕ್ಷವನ್ನು ಐದು ವರ್ಷಗಳ ಕಾಲ ಅಧಿಕಾರ ಅನುಭವಿಸಲು ಆದೇಶ ನೀಡಿದ್ದಾರೆ.ಆದ್ದರಿಂದ, ಬಿಜೆಪಿ ಸರಕಾರ ಉರುಳಿಸುವ ಯಾವುದೇ ಉದ್ದೇಶವಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಉತ್ತರ ಕರ್ನಾಟಕದ ಶಾಸಕರುಗಳು, ಸಂಸದರು ತಮ್ಮನ್ನು ಬೆಂಬಲಿಸಿ ರಾಜೀನಾಮೆ ನೀಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು. ಆದರೆ, ನನ್ನನ್ನು ಹಿಂಬಾಲಿಸುವುದು ಬೇಡ, ನಿಮ್ಮ ನಿಮ್ಮ ಸ್ಥಾನಗಳಲ್ಲಿ ಮುಂದುವರಿಯಿರಿ ಎಂದು ಸಲಹೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರು ಬಹಿರಂಗವಾಗಿರುವುದು ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದರಿಂದ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಸಂಸದರ ಬೆಂಬಲ

ರಾಯಚೂರು ಲೋಕಸಭಾ ಸಂಸದ ಸಣ್ಣ ಫಕೀರಪ್ಪ ಮಾತನಾಡಿ, ರಾಮುಲು ರಾಜೀನಾಮೆ ನಿರ್ಧಾರ ಸ್ವಾಗತಾರ್ಹ. ಹೊಸ ಪಕ್ಷ ಆರಂಭಿಸಿದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಮಾಜಿ ಸಚಿವ ರಾಮುಲು ಅವರನ್ನು ಬೆಂಬಲಿಸಿ ಗದಗ್ ಮತ್ತು ಬೇಟಗೇರಿ ನಗರಸಭೆಗಳ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಶ್ರೀರಾಮುಲು, ಬಿಜೆಪಿ ಸರಕಾರ, ಸಣ್ಣ ಫಕೀರಪ್ಪ, ಸದಾನಂದ ಗೌಡ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ