ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ರೆಡ್ಡಿ ಬಂಧನ: ಆರೋಪ ಬಂದಾಕ್ಷಣ ಆರೋಪಿಯಲ್ಲ: ಸಿಎಂ (Reddy brothers arrest | Chief minister | Sadanand gowda | Illigal mining | Kannada News | Karnataka News | Latest Karnataka News | Bangalore)
PR
ಮಾಜಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಯವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿರುವ ಮಾಹಿತಿ ಬಂದಿದೆ. ಆದರೆ, ಆರೋಪ ಬಂದಾಕ್ಷಣ ಆರೋಪಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕಾರಣಿಗಳ ವಿರುದ್ಧ ಸದಾ ಆರೋಪಗಳಿರುತ್ತವೆ. ಆರೋಪಗಳು ಬಂದ ಕೂಡಲೇ ಅವರನ್ನು ತಪ್ಪಿತಸ್ಱರೆಂದು ಕರೆಯಲಾಗದು. ನ್ಯಾಯಾಲಯದಲ್ಲಿ ಅಪರಾಧಿ ತೀರ್ಪು ಬರುವವರೆಗೆ ಯಾವುದನ್ನು ಹೇಳು ಸಾಧ್ಯವಿಲ್ಲ ಎಂದರು.

ರೆಡ್ಡಿ ಸಹೋದರರ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿರುವುದರಿಂದ ಹೇಳಿಕೆ ನೀಡಲು ಬಯಸುವುದಿಲ್ಲ. ರೆಡ್ಡಿಗಳ ಬಂಧನದಿಂದ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.

ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ರಾಜೀನಾಮೆ ಅವರೊಂದಿಗೆ ಚರ್ಚಿಸಿದ್ದು, ಮುಂದಿನ ಎರಡು -ಮೂರು ದಿನಗಳೊಳಗಾಗಿ ಸಮಸ್ಯೆ ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ರೆಡ್ಡಿ ಸಹೋದರರು, ಮುಖ್ಯಮಂತ್ರಿ, ಸದಾನಂದ ಗೌಡ, ಅಕ್ರಮ ಗಣಿಗಾರಿಕೆ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ