ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಜನಾರ್ದನ ರೆಡ್ಡಿ ನಿವಾಸದಲ್ಲಿ 30 ಕೆಜಿ ಚಿನ್ನ, ಅಪಾರ ನಗದು ವಶ (Janardana Reddy | Bellary | CBI Raid | Sri ramulu | Latest News in Kannada | Kannada News | Karnataka News | Latest Karnataka News | Bangalor)
Janardana Reddy
WD
ಮಾಜಿ ಸಚಿವ, ಬಳ್ಳಾರಿಯ ಗಣಿಧಣಿ ಗಾಳಿ ಜನಾರ್ದನ ರೆಡ್ಡಿ ನಿವಾಸಕ್ಕೆ ಬೆಳ್ಳಂಬೆಳಗ್ಗೆ ದಿಢೀರ್ ಆಗಿ ದಾಳಿ ನಡೆಸಿ ಅವರನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು, ಇಂದು ಮಧ್ಯಾಹ್ನವೇ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದ್ದು, ಅವರ ಪತ್ನಿಗೂ ಮನೆಯಿಂದ ಹೊರಹೋಗದಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದಲ್ಲಿ ಅಧಿಕಾರಿಗಳ ತಪಾಸಣೆ ಮುಂದುವರಿದಿದ್ದು,ಅದೇ ರೀತಿ ರೆಡ್ಡಿ ಹಾಗೂ ಅವರ ಸಂಬಂಧಿಕರ ಒಡೆತನದ ಎಲ್ಲಾ ಕಂಪನಿಗಳ ಮೇಲೂ ದಾಳಿ ನಡೆಸಿರುವ ಸುಮಾರು 12 ಮಂದಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಜನಾರ್ದನ ರೆಡ್ಡಿ ಕುಟೀರ ನಿವಾಸದಲ್ಲಿ ಸಿಬಿಐ ತಪಾಸಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪತ್ನಿ ಅರುಣಾ ಜನಾರ್ದನ ರೆಡ್ಡಿ ಹೊರಹೋಗದಂತೆ ಗೃಹಬಂಧನದಲ್ಲಿ ಇಡಲಾಗಿದೆ.

ಒಟ್ಟಾರೆ ಬಳ್ಳಾರಿ ಗಣಿಧಣಿ ಜನಾರ್ದನ ರೆಡ್ಡಿ ನಿವಾಸ, ಕಂಪನಿಗಳ ಮೇಲೆ ಸಿಬಿಐ ದಿಢೀರ್ ದಾಳಿ ನಡೆಸಿರುವುದು ಬಿಜೆಪಿಯಲ್ಲಿ ತಳಮಳ ಉಂಟು ಮಾಡಿದ್ದರೆ, ರೆಡ್ಡಿ ಸಹೋದರರ ಪಾಳಯದಲ್ಲಿ ಆಘಾತ ಮೂಡಿಸಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟೀರ ನಿವಾಸದಲ್ಲಿ 30 ಕೆಜಿ ಚಿನ್ನ, ಮೂರು ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

ಓಬಳಾಪುರಂ ಮೈನಿಂಗ್ ಆಡಳಿತ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮನೆಯಲ್ಲಿದ್ದ ಸುಮಾರು 1.5ಕೋಟಿ ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ. ರೆಡ್ಡಿ ನಿವಾಸದಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನ, ನಗದು ಪತ್ತೆಯಾಗಿದ್ದು, ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಬಳ್ಳಾರಿ, ಸಿಬಿಐ ದಾಳಿ, ಚಿನ್ನ ವಶ, ಶ್ರೀರಾಮುಲು, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ,