ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ದಾನಶೂರ ರೆಡ್ಡಿ; ವಿವಿಧ ದೇವಾಲಯಕ್ಕೆ 32 ಚಿನ್ನದ ಕಿರೀಟ! (Janardana Reddy | CBI | Illegal Mining | Bellary | Karnataka News | Bangalore News)
ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿ ಆಂಧ್ರಪ್ರದೇಶದ ಚಂಚಲಗುಡ ಜೈಲು ಕಂಬಿ ಹಿಂದಿರುವ ಬಳ್ಳಾರಿ ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕಳೆದ ಒಂದು ದಶಕದಲ್ಲಿ ದಕ್ಷಿಣ ಭಾರತದ ವಿವಿಧ ದೇವಾಲಯಗಳಿಗೆ ವಜ್ರ ಖಚಿತ ಬಂಗಾರದ 32 ಕಿರೀಟಗಳನ್ನು ದಾನವಾಗಿ ನೀಡಿರುವ ಅಂಶ ಬಯಲಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ರೆಡ್ಡಿ ಅವರು ಚಿನ್ನದ ಕಿರೀಟ ಸೇರಿದಂತೆ ವಿವಿಧ ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದರು. ಈಗ ಲಭ್ಯವಾಗಿರುವ ಮೂಲಗಳ ಪ್ರಕಾರ ಒಟ್ಟು 32 ಚಿನ್ನದ ಕಿರೀಟಗಳನ್ನು ನೀಡಿದ್ದಾರೆ. ಈ ಪೈಕಿ 29 ಕಿರೀಟಗಳನ್ನು ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕ ದೇವಸ್ಧಾನಗಳಿಗೆ ನೀಡಿದ್ದಾರೆ. ತಿರುಮಲ ತಿಮ್ಮಪ್ಪನಿಗೆ ಮೂರು ದೊಡ್ಡ ಕಿರೀಟ ನೀಡಲಾಗಿದೆ.

ಬ್ರಹ್ಮಣಿ ಸ್ಟೀಲ್ಸ್‌ಗೆ ಅಗತ್ಯವಿರುವ ಭೂಮಿಯನ್ನು ಆಂಧ್ರಪ್ರದೇಶ ಸರ್ಕಾರ ಮಂಜೂರು ಮಾಡಿದ ಸಂದರ್ಭದಲ್ಲಿ ಒಂದು ದೊಡ್ಡ ಕಿರೀಟವನ್ನು ನೀಡಿದ್ದಾರೆ. ಒಎಂಸಿಗೆ ಗಣಿ ಗುತ್ತಿಗೆ ಪರವಾನಿಗೆಯನ್ನು ನೀಡಿದ ಸಂದರ್ಭದಲ್ಲಿ ಎರಡನೇ ಕಿರೀಟ ಹಾಗೂ 2009ರಲ್ಲಿ ವೈ.ಎಸ್.ರಾಜಶೇಖರ ರೆಡ್ಡಿ ಎರಡನೇ ಬಾರಿಗೆ ಚುನಾವಣೆಯಲ್ಲಿ ಜಯಗಳಿಸಿದಾಗ ಮೂರನೇ ಕಿರೀಟ ನೀಡಿದ್ದಾರೆ.

ಅಕ್ರಮ ಸಂಪಾದನೆಯಿಂದ ಜನಾರ್ದನ ರೆಡ್ಡಿ ಮತ್ತು ಕುಟುಂಬದವರು ದೇವಸ್ಥಾನಗಳಿಗೆ ನೀಡಿರುವ ಚಿನ್ನಾಭರಣಗಳ ಕಾಣಿಕೆಯನ್ನು ಹಿಂತಿರುಗಿಸುವಂತೆ ತಿರುಪತಿ ಮತ್ತು ಶ್ರೀಕಾಳಹಸ್ತಿ ದೇವಸ್ಥಾನದ ಭಕ್ತರು ಒತ್ತಾಯ ಮಾಡಿದ್ದಾರೆ.

2011ರ ಮೇ ತಿಂಗಳಿನಲ್ಲಿ ಕಡಪ ಲೋಕಸಭಾ ಉಪಚುನಾವಣೆಯಲ್ಲಿ ಜಗನ್ ಮೋಹನರೆಡ್ಡಿ ಜಯಗಳಿಸಿದ ಸಂದರ್ಭದಲ್ಲಿ ಶ್ರೀಕಾಳಹಸ್ತಿಯ ಶ್ರೀಜ್ಞಾನ ಪ್ರಸೂನಾಂಭಿಕಾ ದೇವಿ ದೇವಸ್ಥಾನಕ್ಕೆ 12 ಕೋಟಿ ರೂಪಾಯಿ ಮೌಲ್ಯದ ವಜ್ರಖಚಿತ ಬಂಗಾರದ ಕಿರೀಟವನ್ನು ಜನಾರ್ದನ ರೆಡ್ಡಿ ದಾನ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಸಿಬಿಐ, ಅಕ್ರಮ ಗಣಿ, ಬಳ್ಳಾರಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ ಆನ್ಲೈನ್ ನ