ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಯಡಿಯೂರಪ್ಪಗೆ ಬೆದರಿಕೆ ಹಾಕಿದ್ದ ಗವರ್ನರ್: ವಿಕಿಲೀಕ್ಸ್ ಸ್ಫೋಟ (BJP | Governor | Yeddyurappa | WikiLeaks | Assange | Kannada News | Bangalore News)
Bharadwaj
PR
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ನೇರವಾಗಿಯೇ ಜಂಗೀಕುಸ್ತಿಗೆ ಇಳಿದು ಮುಖಭಂಗ ಅನುಭವಿಸಿದ್ದು ಜಗಜ್ಜಾಹೀರಾದ ವಿಚಾರ. ಆದರೆ ಇದೀಗ ಗವರ್ನರ್ ಅವರು ಬಿಜೆಪಿ ಸರ್ಕಾರವನ್ನು ವಜಾ ಮಾಡುತ್ತೇನೆ ಎಂದು ಯಡಿಯೂರಪ್ಪನವರಿಗೆ ಧಮಕಿ ಹಾಕಿದ ಅಂಶ ವಿಕಿಲೀಕ್ಸ್ ಬಯಲು ಮಾಡಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ನಿಮ್ಮ ಸರ್ಕಾರವನ್ನು ವಜಾ ಮಾಡುತ್ತೇನೆ' ಎಂದು ರಾಜ್ಯಪಾಲರು ಯಡಿಯೂರಪ್ಪನವರಿಗೆ ಖಾಸಗಿಯಾಗಿ ಹೇಳಿರುವುದಾಗಿ ಚೆನ್ನೈನಲ್ಲಿರುವ ಅಮೆರಿಕದ ದೂತವಾಸದಿಂದ ವಾಷಿಂಗ್ಟನ್‌ಗೆ ಕಳುಹಿಸಲಾಗಿರುವ ರಹಸ್ಯ ಕೇಬಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ವಿಕಿಲೀಕ್ಸ್ ಹೇಳಿದೆ.

ಹಂಸರಾಜ್ ಭಾರದ್ವಾಜ್ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದದ್ದು 'ನಿಗದಿತ ಉದ್ದೇಶ ಪೂರೈಸಲು'. ಈ ಮಾಹಿತಿಯನ್ನು ಅಮೆರಿಕದ ದೂತವಾಸದ ಅಧಿಕಾರಿಗೆ ಭಾರದ್ವಾಜ್ ಅವರೇ ಹೇಳಿಕೊಂಡಿದ್ದರು. ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂವಿಧಾನ ಬದ್ಧವಾಗಿ ಇರುವ ಹಕ್ಕುಗಳನ್ನು ರಕ್ಷಿಸದ್ದಿದ್ದಲ್ಲಿ ನಿಮ್ಮ ಸರ್ಕಾರವನ್ನು ವಜಾಗೊಳಿಸಲಾಗುವುದು ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಭಾರದ್ವಾಜ್ ಖಾಸಗಿಯಾಗಿ ಎಚ್ಚರಿಕೆ ಕೊಟ್ಟಿದ್ದರು ಎಂಬ ಅಂಶವನ್ನು ವಿಕಿಲೀಕ್ಸ್ ಉಲ್ಲೇಖಿಸಿದೆ.

2009ರ ಆ.31ರಂದು ಈ ಅಮೆರಿಕ ದೂತವಾಸದ ಹಿರಿಯ ಅಧಿಕಾರಿಗೆ ರಾಜ್ಯಪಾಲರು ಈ ವಿಷಯ ತಿಳಿಸಿದ್ದರು ಎಂದು ವಿಕಿಲೀಕ್ಸ್‌ನಲ್ಲಿ ದಾಖಲಿಸಲಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಜೆಪಿ, ಯಡಿಯೂರಪ್ಪ, ಗವರ್ನರ್, ವಿಕಿಲೀಕ್ಸ್, ಅಸ್ಸಾಂಜ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ ಆನ್