ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಜೆಡಿಎಸ್ ಅಭ್ಯರ್ಥಿ ಗೌಡ ಕೋಟಿ ವೀರ, ಬಿಜೆಪಿಯ ಕರಡಿ ಲಕ್ಷಾಧೀಶ (JDS | Congress | BJP | kumaraswmay | koppala by election | Karnataka News | Bangalore News,)
ಕೊಪ್ಪಳ ವಿಧಾನಸಭಾ ಉಪಚುನಾವಣೆ ಪ್ರಚಾರ ಭರಾಟೆ ಜೋರಾಗಿಯೇ ನಡೆಯುತ್ತಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ್ ಹಿಟ್ನಾಳ್ ಶ್ರೀಮಂತ ಅಭ್ಯರ್ಥಿ. ಜೆಡಿಎಸ್ ಅಭ್ಯರ್ಥಿ ಕೋಟಿ ವೀರ, ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಚಿ ಅವರು ಮಾತ್ರ ಲಕ್ಷಾಧೀಶ್ವರ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಾಂಗ್ರೆಸ್ ಹುರಿಯಾಳು ಬಸವರಾಜು 3 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಆದರೆ ಓಡಾಡಲು ಒಂದೇ ಒಂದು ವಾಹನ ಇಲ್ಲ. ಜೆಡಿಎಸ್‌ನ ಪ್ರದೀಪ್ ಗೌಡ ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಆದರೆ ಮೂರು ಬಾರಿ ಶಾಸಕರಾಗಿ ಜನಾದೇಶ ಪಡೆದಿದ್ದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಲಕ್ಷಾಧೀಶ್ವರ, ಓಡಾಡಲು ಒಂದು ಕಾರು ಇದೆ.

ಬಸವರಾಜ್ ಹಿಟ್ನಾಳ್ ಅವರ ಆಸ್ತಿ ವಿವರ: 9 ಲಕ್ಷ ರೂಪಾಯಿ ನಗದು, 1ಕೆಜಿ ಚಿನ್ನಾಭರಣ. ಪತ್ನಿ ಬಳಿ 200 ಗ್ರಾಂ ಚಿನ್ನ ಇದ್ದು, ಇದರ ಬೆಲೆ 25 ಲಕ್ಷ ರೂಪಾಯಿ. 23 ಎಕರೆ ಆಸ್ತಿ ತಮ್ಮ ಹಾಗೂ ಪತ್ನಿ ಹೆಸರಿನಲ್ಲಿ ಇದೆ. ನಾಲ್ಕು ಮನೆ, ಸೈಟ್ ಸೇರಿದಂತೆ ವಿವಿಧ ಬಗೆಯ ಆಸ್ತಿ ಹೊಂದಿದ್ದಾರೆ. 8ಲಕ್ಷ ರೂಪಾಯಿ ಸಾಲ ಹೊಂದಿರುವುದಾಗಿ ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಿದ ವಿವರದಲ್ಲಿ ತಿಳಿಸಿದ್ದಾರೆ.

ಪ್ರದೀಪ್ ಗೌಡ ಕವಲೂರು:ಮಾಜಿ ಶಾಸಕ ವಿರೂಪಾಕ್ಷ ಗೌಡರ ಪುತ್ರ ಪ್ರದೀಪ್‌ಗೌಡ ಕವಲೂರು ಅವರದ್ದು ಮೂಲತಃ ಜಹಗೀರದಾರ ಮನೆತನ. ಇವರ ಕುಟುಂಬದ ಸಾವಿರಾರು ಎಕರೆ ಭೂಮಿ ಭೂ ಸುಧಾರಣಾ ಕಾಯ್ದೆಯಡಿ ಹಂಚಲಾಗಿತ್ತು. ಆದರೂ ಇವರು 1.26 ಕೋಟಿ ಆಸ್ತಿ ಒಡೆಯರು. ಸದ್ಯ ಇವರು 49 ಎಕರೆ ಭೂಮಿ ಮಾಲೀಕರು. 15 ಲಕ್ಷ ನಗದು, ಪತ್ನಿ ಬಳಿ 5 ಲಕ್ಷ ಮತ್ತು ಬ್ಯಾಂಕ್‌ನಲ್ಲಿ 3 ಲಕ್ಷ ರೂಪಾಯಿ ಇದೆ. 22 ಲಕ್ಷ ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ. ಪ್ರದೀಪ್‌ಗೌಡ ಬಳಿ ಅರ್ಧ ಕೆಜಿ, ಪತ್ನಿ ಬಳಿ 250 ಗ್ರಾಂ ಚಿನ್ನ ಇದೆ. ಇವರ ಭೂಮಿಯ ಮೌಲ್ಯ 5 ಲಕ್ಷ, ಸೈಟ್ ಮತ್ತಿತರ ಭೂಮಿಯ ಬೆಲೆ ಸುಮಾರು 30 ಲಕ್ಷ ರೂಪಾಯಿ.

ಸಂಗಣ್ಣ ಕರಡಿ:ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರ ಬಳಿ ಐದು ಲಕ್ಷ ರೂಪಾಯಿ, ಪತ್ನಿ ಬಳಿ 1ಲಕ್ಷ ನಗದು ಇದೆ. 63 ಲಕ್ಷ ರೂಪಾಯಿ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಓಡಾಡಲು ಒಂದು ಇನ್ನೋವಾ ಕಾರು ಹೊಂದಿದ್ದು, ಅದಕ್ಕೂ ಸಾಲ ಮಾಡಿದ್ದಾರೆ. ಸಂಗಣ್ಣ ಬಳಿ 300 ಗ್ರಾಂ ಹಾಗೂ ಪತ್ನಿ ಬಳಿ 200 ಗ್ರಾಂ ಚಿನ್ನ-ಬೆಳ್ಳಿ ಇದೆ. ಅವರ ಚರ ಮತ್ತು ಸ್ಥಿರಾಸ್ತಿ ಒಟ್ಟು ಮೌಲ್ಯ 96.14 ಲಕ್ಷ. ತಮ್ಮ ಹೆಸರಿನಲ್ಲಿ 7 ಲಕ್ಷ, ಪತ್ನಿ ಹೆಸರಿನಲ್ಲಿ 8 ಲಕ್ಷ ರೂಪಾಯಿ ಸಾಲ ಹೊಂದಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಕುಮಾರಸ್ವಾಮಿ, ಸಂಗಣ್ಣ ಕರಡಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ