ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಲೋಕಾಯುಕ್ತಕ್ಕೆ 3 ಅಧಿಕಾರ ಕೊಟ್ರೆ ಸಾಕು: ನ್ಯಾ.ಪಾಟೀಲ್ (Lokayukta | Shivaraj patil | BJP | sadananda Gowda | Karnataka News | Bangalore News,)
shivraj patil
PR
ಲೋಕಾಯುಕ್ತಕ್ಕೆ ಪರಮಾಧಿಕಾರ, ಸರ್ವಾಧಿಕಾರ ನೀಡುವ ಅವಶ್ಯಕತೆ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಸಾಧುವು ಅಲ್ಲ. ಲೋಕಾಯುಕ್ತರಿಗೆ ಸೂಕ್ತ ಮೂರು ಅಧಿಕಾರ ನೀಡಬೇಕು ಎಂದು ಲೋಕಾಯುಕ್ತ ನ್ಯಾ.ಶಿವರಾಜ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಗರದಲ್ಲಿ ಸೋಮವಾರ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಅವರು, ಕರ್ನಾಟಕ ಲೋಕಾಯುಕ್ತ ಕಾಯ್ದೆ ಇಡೀ ದೇಶದಲ್ಲೇ ಉತ್ತಮವಾದ ಕಾಯ್ದೆಯಾಗಿದೆ. ಅದರಲ್ಲಿ ಕೆಲವೊಂದು ಸುಧಾರಣೆಗಳ ಅಗತ್ಯವಿದ್ದು, ಅದನ್ನು ಶೀಘ್ರವೇ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಲೋಕಾಯುಕ್ತಕ್ಕೆ ಸರಿಯಾದ ಅಧಿಕಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿ, ನೌಕರರನ್ನು ಹುದ್ದೆಗೆ ಪುನರ್ ನೇಮಕ ಮಾಡುವಾಗ ಲೋಕಾಯುಕ್ತರ ಗಮನಕ್ಕೆ ತರಬೇಕು ಹಾಗೂ ಲೋಕಾಯುಕ್ತ ದಾಳಿ ನಂತರ ಅಧಿಕಾರಿಗಳು, ನೌಕರರು ಯಾರೇ ಇರಲಿ ಅವರ ವಿಚಾರಣೆಗೆ ಅನುಮತಿ ನೀಡಬೇಕು ಮತ್ತು ಆರೋಪಪಟ್ಟಿ ನ್ಯಾಯಾಲಯದಲ್ಲಿ ದಾಖಲು ಮಾಡಲು ಅವಕಾಶ ನೀಡುವಂತಹ ಮೂರು ಅಧಿಕಾರಗಳು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದ 30 ಜಿಲ್ಲೆಗಳ ಪ್ರವಾಸವನ್ನು ಗುಲ್ಬರ್ಗಾದಿಂದಲೇ ಆರಂಭಿಸಿದ್ದು, ಎಲ್ಲ ಜಿಲ್ಲೆಗಳ ಪ್ರವಾಸದ ನಂತರ ಅಲ್ಲಿನ ಜನರ ಕುಂದು ಕೊರತೆ, ಅಹವಾಲು ಸ್ವೀಕರಿಸಿ ಬೆಂಗಳೂರಿನಲ್ಲಿ ಬೃಹತ್ ಸಭೆಯೊಂದನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಾಯುಕ್ತ, ಶಿವರಾಜ್ ಪಾಟೀಲ್, ಬಿಜೆಪಿ, ಸದಾನಂದ ಗೌಡ, ಪರಮಾಧಿಕಾರ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ